ಇಸ್ಲಾಮಾಬಾದ್, ನ 7 (Daijiworld/MSP): ಪಾಕಿಸ್ತಾನದ ಮಾಜಿ ಪ್ರಧಾನಿ 69 ವರ್ಷದ ನವಾಜ್ ಷರೀಫ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.
ಆದರೆ ಈ ನಡುವೆ ಶರೀಫ್ ಅವರಿಗೆ ಸ್ಲೋ ಫಾಯಿಸನ್ ನೀಡಿ ಸಾವು ಬರವಂತೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಮುತ್ತಾಹಿದ್ ಕೌಮಿ ಮೊಮೆಂಟ್ ಸಂಘಟನೆಯ ಮುಖ್ಯಸ್ಥ ಅಲ್ತಾಪ್ ಹುಸೈನ್ ಎಂಬವರು ಮಾಡಿದ್ದಾರೆ. ಇವರ ಆರೋಪದ ಪ್ರಕಾರ ನವಾಜ್ ಷರೀಫ್ ಅವರಿಗೆ ಫೊಲೊನಿಯಂ ಎಂಬ ವಿಷ ನೀಡಲಾಗಿದ್ದು, ಇದು ಸೇವಿಸುವ ವ್ಯಕ್ತಿ ನಿಧಾನವಾಗಿ ಸಾಯುತ್ತಾರೆ. ಇದೇ ವಿಷ ಈ ಹಿಂದೆ ಪ್ಯಾಲೆಸ್ತೇನಿಯದ ಅಧ್ಯಕ್ಷರ ಹತ್ಯೆಯಲ್ಲೂ ಬಳಕೆಯಾಗಿತ್ತು ಎಂದು ಆರೋಪಿಸಿದ್ದಾರೆ. ಈ ವಿಷ ಬಿಳಿರಕ್ತಕಣಗಳನ್ನು ನಾಶಪಡಿಸುತ್ತದೆ ಎಂದಿದ್ದಾರೆ. ರೆಡಿಯೋ ಆಕ್ಟೀವ್ ಪ್ರಾವೀಣ್ಯತೆ ಹೊಂದಿರುವ ಲ್ಯಾಬ್ ನಲ್ಲಿ ಮಾತ್ರ ಇದನ್ನು ಕಂಡುಹಿಡಿಯಲು ಸಾಧ್ಯ ಎಂದಿದ್ದಾರೆ.
ಸ್ಟೀಲ್ ಮಿಲ್ಸ್ ಭ್ರಷ್ಟಾಚಾರ ಪ್ರಕರಣದಲ್ಲಿ ಷರೀಫ್ ಅವರಿಗೆ 2018ರ ಡಿಸೆಂಬರ್ ನಲ್ಲಿ ನ್ಯಾಯಾಲಯವು 7 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಚೌಧರಿ ಶುಗರ್ ಮಿಲ್ಸ್ ಪ್ರಕರಣದಲ್ಲಿ ನವಾಜ್ ಷರೀಫ್ ಹಾಗೂ ಅವರ ಕುಟುಂಬದವರನ್ನು ರಾಷ್ಟ್ರೀಯ ತನಿಖಾ ದಳವು ವಿಚಾರಣೆ ಮಾಡುತ್ತಿದೆ. ಆದರೆ ಅನಾರೋಗ್ಯಕ್ಕೊಳಗಾದ ಹಿನ್ನಲೆಯಲ್ಲಿ ಷರೀಫ್ ಅವರಿಗೆ ಜಾಮೀನು ನೀಡಲಾಗಿತ್ತು.
ನವಾಜ್ ಷರೀಫ್ ರಕ್ತದಲ್ಲಿನ ಬಿಳಿರಕ್ತಕಣಗಳ (ಪ್ಲೇಟ್ಲೇಟ್) ಸಂಖ್ಯೆಯು ನಿರಂತರವಾಗಿ ಕುಸಿಯುತ್ತಿದೆ. ಕಳೆದ ಭಾನುವಾರ ಒಂದೇ ದಿನ ಅವರ ಪ್ಲೇಟ್ಲೇಟ್ ಸಂಖ್ಯೆಯು 45 ಸಾವಿರದಿಂದ 25 ಸಾವಿರಕ್ಕೆ ಇಳಿದಿತ್ತು ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ಅಡ್ನಾನ್ ಖಾನ್ ಸರಣಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದರು.