ಫಿನ್ಲೆಂಡ್, ನ 8 (Daijiworld News/MSP): ಅರೆ ಇದೇನಿದು? ಸಮುದ್ರತೀರದಲ್ಲಿ ಸಾವಿರಕ್ಕೂ ಹೆಚ್ಚು ಮೊಟ್ಟೆಗಳು.. ಪುಟ್ಬಾಲ್ ಗಾತ್ರದ ಈ ಮೊಟ್ಟೆಗಳು ಯಾವ ಪ್ರಾಣಿಯದ್ದು ? ಹೀಗೆ ಪ್ರಶ್ನೆಗಳ ಸಾಲು ಉದ್ಬವಿಸೋದು ಸಹಜ. " ಐಸ್ ಎಗ್ಸ್ " ಇಂತದೊದ್ದು ಅಪರೂಪದ ವಿಧ್ಯಮಾನ ಕಂಡಬಂದಿದ್ದು ಫಿನ್ಲೆಂಡ್’ನ ಸಮುದ್ರತೀರದಲ್ಲಿ.
ಫಿನ್ಲೆಂಡ್’ನ ಹೈಲುಟೊ ದ್ವೀಪದ ಮಾರ್ಜನಿಯೆಮಿ ಬೀಚ್ನಲ್ಲಿ ಕಂಡುಬಂದ ಅಪರೂಪದ ವಿದ್ಯಮಾನವನ್ನು ಹವ್ಯಾಸಿ ಛಾಯಾಗ್ರಹಕರ ರಿಸ್ಟೊ ಮಟಿಲ್ಲಾ ಸೆರೆಹಿಡಿದಿದ್ದಾರೆ. ಇವರು ಭಾನುವಾರದಂದು ಮಾರ್ಜನಿಯೆಮಿ ಬೀಚ್ ಪ್ರದೇಶಕ್ಕೆ ಭೇಟಿ ನೀಡಿದಾಗ 30 ಮೀಟರ್ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿಕೊಂಡ ಹಿಮಾವೃತ ಚೆಂಡುಗಳನ್ನು ಕಂಡು ದಂಗುಬಡಿದಿದ್ದರು. " ಇಂತಹ ವಿದ್ಯಮಾನವನ್ನು ನಾನು ಈ ಹಿಂದೆ ನೋಡಿಲ್ಲ..ಅದ್ಭುತ ನೋಟವಾಗಿತ್ತು. ಚಿಕ್ಕ ಗಾತ್ರಗಳ ಮೊಟ್ಟೆಗಳಿಂದ ಹಿಡಿದು ದೊಡ್ಡದು ಫುಟ್ಬಾಲ್ನ ಗಾತ್ರದಷ್ಟಿತ್ತು" ಎಂದು ವಿವರಿಸಿದ್ದಾರೆ. ಇದನ್ನು ’ದಿ ಗಾರ್ಡಿಯನ್ ’ ಪತ್ರಿಕೆ ವರದಿ ಮಾಡಿದೆ
ಫೀನಿಷ್ ಹವಾಮಾನ ಸಂಸ್ಥೆಯ ಹಿಮ ತಜ್ಞ ಜೌನಿ ವೈನಿಯೊ, ಪ್ರಕಾರ " ಈ ಘಟನೆ ಸಾಮಾನ್ಯವಲ್ಲ, ಅತಿ ಅಪರೂಪವಾಗಿ ಕಂಡುಬರುವ "ಐಸ್ ಎಗ್ಸ್ ನಿರ್ದಿಷ್ಟ ಹವಾಮಾನ ಪರಿಸ್ಥಿತಿಗಳಲ್ಲಿ ಮಾತ್ರ ಇದು ಸಂಭವಿಸುತ್ತದೆ. ನಿಮಗೆ ಸರಿಯಾದ ಗಾಳಿಯ ಉಷ್ಣಾಂಶ (ಶೂನ್ಯಕ್ಕಿಂತ ಕಡಿಮೆ, ಆದರೆ ಸ್ವಲ್ಪ ಮಾತ್ರ), ಸರಿಯಾದ ನೀರಿನ ತಾಪಮಾನ (ಘನೀಕರಿಸುವ ಹಂತದ ಹತ್ತಿರ), ಆಳವಿಲ್ಲದ ಮತ್ತು ನಿಧಾನವಾಗಿ ಇಳಿಜಾರಿನ ಮರಳು ಬೀಚ್ ಮತ್ತು ಶಾಂತ ಅಲೆಗಳು ಬೇಕಾಗಬಹುದು, ಇಂತಹ ಸಂದರ್ಭದಲ್ಲಿ ಮಾತ್ರ ಹಿಮಗಳು ಉಬ್ಬಿಕೊಳ್ಳಬಹುದು" ಎಂದು ವಿವರಿಸಿದ್ದಾರೆ.
" ಇಂತಹ ಫೋಟೋಗಳು ಮತ್ತು ಅವಲೋಕನಗಳನ್ನು ಹಂಚಿಕೊಂಡ ಹವ್ಯಾಸಿ ಛಾಯಾಗ್ರಾಹಕರಿಗೆ ಧನ್ಯವಾದಗಳು . ಎಂದಿಗೂ ನಮ್ಮಲ್ಲಿ ಹೆಚ್ಚಿನವರು ನೋಡಲಾಗದಂತಹದನ್ನು ಅಪರೂಪದ ವಿದ್ಯಾಮಾನವನ್ನು ಈಗ ಜಗತ್ತು ನೋಡುತ್ತದೆ. ಶರತ್ಕಾಲವು ಈ ಅಪರೂಪದ ವಿದ್ಯಮಾನವನ್ನು ನೋಡಲು ಸೂಕ್ತ ಸಮಯ " ಎಂದು ಇಲಿನಾಯ್ಸ್ ಸ್ಟೇಟ್ ಯೂನಿವರ್ಸಿಟಿಯ ಭೌಗೋಳಿಕ-ಭೂವಿಜ್ಞಾನದ ಎಮೆರಿಟಸ್ ಪ್ರಾಧ್ಯಾಪಕ ಡಾ. ಜೇಮ್ಸ್ ಕಾರ್ಟರ್ ಹೇಳಿದ್ದಾರೆ.