ಸ್ಪೇನ್, ನ 11 (Daijiworld News/MSP): ಸೊಳ್ಳೆಗಳಿಂದ ಮಾತ್ರ ಹರಡಬಹುದಾದ ಡೆಂಗ್ಯೂ ವೈರಸ್ ಲೈಂಗಿಕ ಸಂಪರ್ಕದ ಮೂಲಕ ಹರಡಿದ ಮೊತ್ತ ಮೊದಲ ಪ್ರಕರಣವನ್ನು ಸ್ಪೇನ್ನ ವೈದ್ಯರು ಹಚ್ಚಿದ್ದಾರೆ.
ಮ್ಯಾಡ್ರಿಡ್ ಎನ್ನುವ 41 ವರ್ಷದ ವ್ಯಕ್ತಿಯೊಬ್ಬ ತನ್ನ ಪುರುಷ ಸಂಗಾತಿಯ ಜೊತೆಗೆ ಲೈಂಗಿಕ ಸಂಪರ್ಕ ಹೊಂದಿದ ಬಳಿಕ ಡೆಂಗ್ಯೂ ವೈರಸ್ಗೆ ತುತ್ತಾಗಿದ್ದಾನೆ. ಸಾರ್ವಜನಿಕ ಆರೋಗ್ಯ ಇಲಾಖೆಯ ಆರೋಗ್ಯ ಅಧಿಕಾರಿಗಳ ಪ್ರಕಾರ, ಮ್ಯಾಡ್ರಿಡ್ ಕ್ಯೂಬಾ ಪ್ರವಾಸಕ್ಕೆ ತೆರಳಿದ್ದು, ಅಲ್ಲಿ ಆತ ಡೆಂಗ್ಯೂ ವೈರಸ್ಗೆ ಒಳಗಾಗಿದ್ದ. ಅಲ್ಲಿಂದ ಹಿಂತಿರುಗಿದ ಬಳಿಕ ಆತನ ಪುರುಷ ಸಂಗಾತಿಯಲ್ಲೂ ಡೆಂಗ್ಯೂ ವೈರಸ್ ಪತ್ತೆಯಾಗಿತ್ತು.
ದಿ ಟೆಲಿಗ್ರಾಫ್ ಪ್ರಕಾರ, ಸೆಪ್ಟೆಂಬರ್ನಲ್ಲಿ ಮ್ಯಾಡ್ರಿಡ್ ಸಂಗಾತಿಯಲ್ಲಿ ಡೆಂಗ್ಯೂ ಪಾಸಿಟಿವ್ ಧೃಡಪಡಿಸಲಾಯಿತು, ಆದರೆ ಅಧಿಕಾರಿಗಳಿಗೆ ಆತ ಹೇಗೆ ವೈರಸ್ಗೆ ತುತ್ತಾಗಿದ್ದ ಎನ್ನುವುದು ಮೊದಲಿಗೆ ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಆತನಲ್ಲಿ ಪತ್ತೆಯಾದ ಸೋಂಕು ಸ್ಪೇನ್ ನಲ್ಲಿ ಪತ್ತೆಯಾಗಿರಲಿಲ್ಲ. ಜೊತೆಗೆ ಆ ಸಾಮ್ಯತೆ ಇದ್ದ ಸೋಂಕು ಪತ್ತೆಯಾದ ಪ್ರದೇಶದಲ್ಲಿ ಆತ ವಾಸಿಸುತ್ತಿಲ್ಲ. ಇದು ವೈದ್ಯರ ಸಂಶಯಕ್ಕೆ ಕಾರಣವಾಗಿತ್ತು. ಕೊನೆಗೆ ಸಂಗಾತಿಯಿಂದ ಲೈಂಗಿಕವಾಗಿ ಹರಡುವ ಸಾಧ್ಯತೆಯೇ ದಟ್ಟವಾಯಿತು.
ಕ್ಯೂಬಾ ಮತ್ತು ಡೊಮಿನಿಕನ್ ರಿಪಬ್ಲಿಕ್ ಪ್ರವಾಸದ ಹತ್ತು ದಿನಗಳ ಬಳಿಕ ಮ್ಯಾಡ್ರಿಡ್ ನಲ್ಲಿ ರೋಗಲಕ್ಷಣಗಳು ಪತ್ತೆಯಾಗಿತ್ತು. ಆ ಬಳಿಕ ಇವರಿಬ್ಬರ ವೀರ್ಯದ ಪ್ರಯೋಗಾತ್ಮಕ ವಿಶ್ಲೇಷಣೆ ನಡೆಸಿದಾಗ ಡೆಂಗ್ಯೂ ಪಾಸಿಟಿವ್ ಮಾತ್ರವಲ್ಲದೆ ಅವರಿಬ್ಬರಲ್ಲಿ ಕ್ಯೂಬಾದಲ್ಲಿ ಕಂಡುಬರುವ ಡೆಂಗ್ಯು ವೈರಸ್ ಪತ್ತೆಯಾಗಿತ್ತು ಎಂದು ಸ್ಪೇನ್ನಿಂದ ಆರೋಗ್ಯ ಅಧಿಕಾರಿ ಸುಸಾನಾ ಜಿಮಿನೆಜ್ ಹೇಳಿದ್ದಾರೆ.
ಡೆಂಗ್ಯೂ ಜ್ವರದಲ್ಲಿ ಕಂಡು ಬರುವ ನಾಲ್ಕು ವಿಧದ ವೈರಸ್ ಗಳು ಕೂಡಾ ಸೋಂಕಿತ ವ್ಯಕ್ತಿಗೆ ಕಚ್ಚಿದಾಗ ಸೊಳ್ಳೆಗಳ ಮೂಲಕ ಇತರರಿಗೂ ರೋಗಾಣು ಹರಡುತ್ತದೆ ತಿಳಿದುಬಂದಿತ್ತು. ಆದರೆ ಇದೇ ಮೊದಲ ಬಾರಿಗೆ ಲೈಂಗಿಕ ಸಂಪರ್ಕದ ಮೂಲಕ ವೈರಸ್ ಹರಡಿದ ಪ್ರಕರಣವೂ ಪತ್ತೆಯಾಗಿದೆ.
ಡೆಂಗ್ಯೂ ಎಂಬ ಖಾಯಿಲೆಯು ವೈರಸ್ ನಿಂದ ಹರಡುವ ಒಂದು ಸೋಂಕು ರೋಗವಾಗಿದೆ, ರಚನೆಯಲ್ಲಿ ಅಲ್ಪ ಪ್ರಮಾಣದ ವ್ಯತ್ಯಾಸವಿರುವ DENV1, DENV2,DENV2, DENV4 ಎಂಬ 4 ವಿಧದ ವೈರಸ್ ಗಳಿಂದ ಹರಡುತ್ತದೆ. ಈಡಿಸ್ ಈಜಿಪ್ಟಿ ಸೊಳ್ಳೆ ಸೋಕಿತರಿಗೆ ಕಚ್ಚುವ ಮೂಲಕ ಹರಡುತ್ತದೆ.