ಪಾಕಿಸ್ತಾನ, ನ 14 (Daijiworld News/MB) : ಹಿಂದೂ ಸಮುದಾಯ ದೀರ್ಘಕಾಲದಿಂದ ಬೇಡಿಕೆಯನ್ನು ಪರಿಗಣಿಸಿದ ಪಾಕಿಸ್ತಾನ ಮುಚ್ಚಿದ್ದ ದೇವಾಲಯದ ಬಾಗಿಲನ್ನು ತೆರೆಯುವ ಮತ್ತು ಅದನ್ನು ನವೀಕರಣ ಮಾಡುವ ನಿರ್ಧಾರವನ್ನು ಇಮ್ರಾನ್ ಖಾನ್ ಸರ್ಕಾರ ಕೈಗೊಂಡಿದೆ.
ಭಾರತದಲ್ಲಿ ಅಯೋಧ್ಯೆ ತೀರ್ಪು ಪ್ರಕಟವಾದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಹಿಂದೂ ದೇವಾಲಯವನ್ನು ತೆರೆಯುವಂತೆ ಹಿಂದೂ ಸಮುದಾಯ ದೀರ್ಘಕಾಲದಿಂದ ಬೇಡಿಕೆಯನ್ನು ಮುಂದಿಟ್ಟಿದ್ದು ಪಾಕಿಸ್ತಾನ ಸರಕಾರ ಪರಿಗಣಿಸಿದೆ. ಈ ಕುರಿತಂತೆ ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ.
ಸರ್ಕಾರದ 10 ಸಾಧನೆಗಳ ವಿವರಗಳನ್ನು ಪಾಕಿಸ್ತಾನದ ತೆಹ್ರೀಕ್-ಇ-ಇನ್ಸಾಫ್ ವಕ್ತಾರ ಅಹ್ಮದ್ ಜವಾದ್ ಅವರು ಬಿಡುಗಡೆ ಮಾಡುವಾಗ ಈ ಮಾಹಿತಿಯನ್ನೂ ಬಹಿರಂಗಪಡಿಸಿದ್ದಾರೆ.
ದೇವಾಲಯಗಳನ್ನು ತೆರೆಯಬೇಕೆಂದು ದೇಶದಲ್ಲಿ ಹಿಂದೂ ಸಮುದಾಯ ಬಹುಕಾಲದಿಂದ ಒತ್ತಾಯ ಮಾಡುತ್ತಿದ್ದು, ಈ ಬೇಡಿಕೆಯನ್ನು ಒಪ್ಪಿದ ಸರ್ಕಾರ ದೇವಾಲಯಗಳನ್ನು ತೆರೆಯಲು ನಿರ್ಧರಿಸಿದೆ ಎಂದು ವರದಿ ತಿಳಿಸಿದೆ.