ಕುವೈಟ್, ನ 26 (Daijiworld News/MB) : ಕುವೈಟ್ ತನಿಖಾಧಿಕಾರಿಗಳು, ಉದ್ಯೋಗ ಬಯಸಿ ಕುವೈಟ್ಗೆ ಹೋಗುವವರಿಗೆ ಭಾರತೀಯ ರಾಯಾಭಾರ ಕಚೇರಿ ಹಾಗೂ ಕುವೈತ್ನ ವಿದೇಶಾಂಗ ಸಚಿವಾಲಯದ ನಕಲಿ ಸಹಿ ಹಾಗೂ ಮೊಹರು ಬಳಸಿ ವಾಹನ ದಾಖಲೆ ತಯಾರಿ ಮಾಡುತ್ತಿದ್ದ 7 ಭಾರತೀಯ ನಿವಾಸಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಆಂಧ್ರಪ್ರದೇಶ ನಿವಾಸಿಗಳಾಗಿದ್ದು, ಉದ್ಯೋಗ ಬಯಸಿ ಕುವೈಟ್ಗೆ ತೆರಳುವವರಿಗೆ ಪೋರ್ಜರಿಯಾಗಿ ಸರ್ಟಿಫಿಕೆಟ್ ಹಾಗೂ ದಾಖಲೆಗಳನ್ನು ಮಾಡಿ ತಿಂಗಳಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡುತ್ತಿದುದ್ದಾಗಿ ತಿಳಿದು ಬಂದಿದೆ.
ಕುವೈಟ್ಗೆ ಕೆಲಸಕ್ಕೆಂದು ತೆರಳಿದ ಭಾರತೀಯರಿಗೆ ತಮ್ಮ ಮೂಲ ಪರವಾನಗಿ ಹಾಜರು ಮಾಡಿ ಕುವೈಟ್ ನ ಪರವಾನಗಿ ಪಡೆಯಲು ಹಾಗೂ ಅಪ್ಗ್ರೇಡ್ ಮಾಡಲು ತಾಂತ್ರಕ ಕೆಲಸಗಳಿರುವ ಕಾರಣ ಹಲವು ದಿನಗಳು ತಗಳುತ್ತದೆ. ಹಾಗಾಗೀ ಇಂತಹ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡ ಆರೋಪಿಗಳು ನಾವು ಶೀಘ್ರದಲ್ಲೇ ಸರ್ಟಿಫಿಕೆಟ್ ಹಾಗೂ ಡಾಕ್ಯೂಮೆಂಟ್ಗಳನ್ನು ಮಾಡುವುದಾಗಿ ನಂಬಿಸಿ ರುಜು ಮತ್ತು ಮೊಹರುಗಳನ್ನು ಪೋರ್ಜರಿ ಮಾಡಿ ದಿನಾರ್ ಲೆಕ್ಕದಲ್ಲಿ ವ್ಯವಹಾರ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಕುರಿತು ಅನಿವಾಸಿ ಭಾರತೀಯ ಮೋಹನ್ದಾಸ್ ಕಾಮತ್ ಮಂಜೇಶ್ವರ ಮಾತಾನಾಡಿ "ಈ ಹಗರಣದ ಹಿಂದೆ ಇನ್ನಷ್ಟು ದೊಡ್ಡ ಜಾಲವಿರುವ ಶಂಕೆಯಿದ್ದು, ನಕಲಿ ಸರ್ಟಿಫಿಕೆಟ್ ಹೊಂದಿರುವ ಕಾರಣದಿಂದಾಗಿ ಬಂಧನವಾದರೆ ದೀರ್ಘಕಾಲದ ಜೈಲು ವಾಸ ಅನುಭವಿಸುವ ಸಾಧ್ಯೆತೆ ಇದೆ" ಎಂದು ತಿಳಿಸಿದ್ದಾರೆ.