ಅಮೇರಿಕಾ, ನ 26 (Daijiworld News/MSP): ವಿಮಾನವೊಂದು ಅಪಘಾತಕ್ಕೀಡಾಗಿ ಹೈ- ವೋಲ್ಟೇಜ್ ವಿದ್ಯುತ್ ತಂತಿಗಳ ಮಧ್ಯದಲ್ಲಿ ಸಿಲುಕಿ ಕೊನೆಗೆ ಪೈಲಟ್ ಅನ್ನು ಸುರಕ್ಷಿತವಾಗಿ ರಕ್ಷಿಸಲಾದ ಘಟನೆ ಅಮೆರಿಕದ ಮಿನಸ್ಸೋಟಾದಲ್ಲಿ ನಡೆದಿದೆ.
ಶಕೋಪಿ ಬಳಿ ಸಿಂಗಲ್ ಎಂಜಿನ್ ನ ಈ ವಿಮಾನವನ್ನು 65 ವರ್ಷದ ಪೈಲಟ್ ಥಾಮಸ್ ಕಾಶ್ವಿಚ್ ಎಂಬುವರು ಚಾಲನೆ ಮಾಡುತ್ತಿದ್ದರು. ಅವರು ವಿಮಾನದಲ್ಲಿದ್ದ ಏಕೈಕ ವ್ಯಕ್ತಿಯಾಗಿದ್ದರು. ಹೈ -ವೋಲ್ಟೇಜ್ ಸಂಚಾರವಿದ್ದ ತಂತಿಗೆ ಸಿಲುಕಿಕೊಂಡರೂ ಸಹ ಯಾವುದೇ ಗಾಯಗಳಿಲ್ಲದೇ ಪೈಲಟ್ ಪವಾಡಸದೃಶವಾಗಿ ಪಾರಾಗಿದ್ದಾರೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ, ಆಂಬುಲೆನ್ಸ್, ಪೊಲೀಸ್ ಹಾಗೂ ವಿದ್ಯುಚ್ಛಕ್ತಿ ಇಲಾಖೆಗಳ ಸಿಬ್ಬಂದಿ ಜಮಾಯಿಸಿ,ರ ಕ್ಷಣಾ ಕಾರ್ಯವನ್ನು ಯಶಸ್ವಿಯಾಗಿ ಮಾಡಿವೆ.