ಇಸ್ಲಮಾಬಾದ್, ಡಿ 17 (Daijiworld News/MB) : ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಶ್ರಫ್ ಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ.
ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಶ್ರಫ್ ಗೆ ಪಾಕಿಸ್ಥಾನದ ವಿಶೇಷ ನ್ಯಾಯಾಲಯ ದೇಶದ್ರೋಹದ ಆರೋಪದಲ್ಲಿ ಗಲ್ಲು ಶಿಕ್ಷೆ ವಿಧಿಸಿದೆ.
ಮುಶ್ರಫ್ ನಾಲ್ಕು ವರ್ಷದ ಹಿಂದೆ ಲಂಡನ್ ಗೆ ಪರಾರಿಯಾಗಿದ್ದು ಬಳಿಕ ಕಳೆದ ಪಾಕಿಸ್ಥಾನ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಮರಳಿ ಪಾಕಿಸ್ತಾನಕ್ಕೆ ಬಂದಿದ್ದರು.
ಸದ್ಯ ಪರ್ವೇಜ್ ಮುಶ್ರಫ್ ದುಬೈನಲ್ಲಿ ನೆಲೆಸಿದ್ದು ಅನಾರೋಗ್ಯದಿಂದ ಬಳಲುತ್ತಿದ್ದಾರೆ.