ದುಬೈ, ಡಿ 17 (Daijiworld News/PY) : ದುಬೈನ ಆಪ್ಟಿಕಲ್ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿದ್ದ ಭಾರತೀಯನೊಬ್ಬ, ಗ್ರಾಹಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಸೋಮವಾರ ನಡೆದಿದ್ದು ಕಿರುಕುಳ ನೀಡಿದ ಆರೋಪಿಗೆ ದುಬೈ ನ್ಯಾಯಾಲಯವು ಆತನಿಗೆ ಮೂರು ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಮಾತ್ರವಲ್ಲದೇ 3 ತಿಂಗಳ ಜೈಲು ಶಿಕ್ಷೆಯ ಬಳಿಕ ಗಡಿಪಾರು ಮಾಡುವಂತೆ ಆದೇಶಿಸಿದೆ.
ಈತ 26 ವರ್ಷದ ಭಾರತೀಯನಾಗಿದ್ದು ಈ ಘಟನೆಗೆ ಸಂಬಂಧಿಸಿ ಸಾರ್ವಜನಿಕ ವಿಚಾರಣೆ ನಡೆಸಿದಾಗ ಆರೋಪಿಯು ಗ್ರಾಹಕಿ ಮಹಿಳೆಯ ತೋಳನ್ನು ಹಿಡಿದು ಬಳಿಕ ಕೆನ್ನೆಗೆ ಮುತ್ತಿಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಫಿಲಿಪಿನೋ ರಿಯಲ್ ಎಸ್ಟೇಟ್ ಅಧಿಕಾರಿ ಪ್ರಕಾರ, ರಾತ್ರಿ 10 ಗಂಟೆಗೆ ಶಾಪಿಂಗ್ ಸೆಂಟರ್ಗೆ ಹೋದಾಗ ಈ ಘಟನೆ ನಡೆದಿದೆ. ನಾನು ಡ್ರೈವಿಂಗ್ ಇನ್ಸಿಟ್ಯೂಟ್ ಕಚೇರಿಗೆ ಭೇಟಿ ಮಾಡಲು ಹೋಗಿದ್ದೆ ಬಳಿಕ ನನ್ನ ಕಣ್ಣುಗಳನ್ನು ಪರೀಕ್ಷಿಸಲು ಮತ್ತು ವರದಿಯನ್ನು ಪಡೆಯಲು ಹತ್ತಿರದ ಆಪ್ಟಿಕಲ್ ಅಂಗಡಿಗೆ ಹೋಗಲು ಸೂಚನೆ ನೀಡಲಾಯಿತು" ಎಂದು ತಿಳಿಸಿದ್ದಾರೆ.
ಆತ ಲೈಂಗಿಕ ಕಿರುಕುಳ ನಡೆಸಿದ ಹಿನ್ನಲೆಯಲ್ಲಿ ಆಕೆ ಅಂಗಡಿಯ ಕ್ಯಾಷಿಯರ್ಗೆ ಒಂದು ಕಾಗದದಲ್ಲಿ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಬರೆದು ಸುಳಿವು ನೀಡಲು ಯತ್ನಿಸಿದ್ದಾಳೆ.
ಮರುದಿನ, ಮಹಿಳೆ ಅಲ್ ಮುರಕ್ಕಾಬತ್ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ದೂರು ದಾಖಲಿಸಿದ್ದಾಳೆ.
ಇದಾದ ಒಂದೇ ದಿನದಲ್ಲಿ ಕಿರುಕುಳ ನೀಡಿದ ಆರೋಪಿಗೆ ದುಬೈ ನ್ಯಾಯಾಲಯವು ಮೂರು ತಿಂಗಳ ಕಾಲ ಜೈಲು ಶಿಕ್ಷೆ ಹಾಗೂ ಗಡಿಪಾರು ಶಿಕ್ಷೆಯನ್ನು ವಿಧಿಸಿದೆ.