ನೈಜೀರಿಯಾ, ಡಿ 18 (Daijiworld News/PY) : ಮಹಿಳಾ ರಾಜಕಾರಣಿಯನ್ನು ಕತ್ತು ಹಿಸುಕಿ ಕೊಂದು ಆಕೆಯ ಆಸ್ತಿಯನ್ನು ವಶಪಡಿಸಿಕೊಂಡ ಕಾರಣಕ್ಕಾಗಿ ನೈಜೀರಿಯಾದ ರಾಜಕುಮಾರನಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ.
ಲಾಗೋಸ್ನ 23 ನೇ ಓಬಾದ ದಿವಂಗತ ಎರಡನೇ ಅಡೆಯಿಂಕಾ ಒಯೆಕಾನ್ ಮಗ ಪ್ರಿನ್ಸ್ ಅಡೆವಾಲೆ ಒಯೆಕಾನ್ (50), 2012 ರಲ್ಲಿ ಉದ್ಯಮಿ ಮತ್ತು ರಾಜಕಾರಣಿ ಅಲ್ಹಾಜಾ ಸಿಕಿರಾತ್ ಎಕುನ್ ಅವರನ್ನು ಹತ್ಯೆ ಮಾಡಿದ್ದನು.
ನೈಜೀರಿಯಾದ ರಾಜಧಾನಿಯಲ್ಲಿರುವ ಎಂಎಸ್ ಎಕುನ್ ಅವರ ರೆಸ್ಟೋರೆಂಟ್ ಅನ್ನು ನಿರ್ವಹಿಸುತ್ತಿದ್ದ ರಾಜಕುಮಾರ, ತನ್ನ ಮಾಜಿ ಸೇವಕ ಲತೀಫ್ ಬೊಲೊಗುನ್ (27) ಅವರನ್ನು ನೇಮಕ ಮಾಡಿಕೊಂಡಿದ್ದು, ಹಣದ ವ್ಯವಹಾರ ನಡೆಸಿ ರಾಜಕಾರಣಿಯನ್ನು ಕೊಲೆಮಾಡಲು ಪಿತೂರಿ ನಡೆಸಿದ್ದರು.
62 ವರ್ಷದ ಮಹಿಳೆಯನ್ನು ಕತ್ತು ಹಿಸುಕಿ ಕೊಂದು, ಆಕೆಯ ಮನೆಯ ಬಳಿ ಇರುವ 1000 ಅಡಿ ಆಳದ ಬಾವಿಗೆ ಎಸೆದು ಬಾವಿಯನ್ನು ಗ್ಯಾಸ್ ಹಾಗೂ ಸಿಲಿಂಡರ್ ಬಳಸಿ ಮುಚ್ಚಾಲಾಗಿದೆ ಎಂದು ಸ್ಥಳೀಯ ಮಾಧ್ಯಮದಲ್ಲಿ ವರದಿಯಾಗಿದೆ. ಆಕೆಯನ್ನು ಕೊಂದ ಬಳಿಕ ಆಕೆಗೆ ಸೇರಿದ ಆಸ್ತಿ ಪಾಸ್ತಿಗಳನ್ನು ಹಾಗೂ ಒಂದು ಬಸ್ಸನ್ನು ಆರೋಪಿಗಳು ಸ್ವಾಧೀನ ಪಡಿಸಿಕೊಂಡಿದ್ದಾರೆ.
ನೈಜೀರಿಯಾದ ರಾಜಕುಮಾರ ಅಡೆವಾಲೆ ಒಯೆಕಾನ್ ತನ್ನ ತಾಯಿ ಸಾಯುವವರೆಗೂ ರಾಜ್ಯದಲ್ಲಿ ವಾಸ್ತುಶಿಲ್ಪವನ್ನು ಕಲಿಯುತ್ತಿದ್ದನು. ಇದಾಗಿ ತನ್ನ ತಂದೆಯ ಸಾವಿನ ಬಳಿಕ ಮರಳಿ ನೈಜೀರಿಯಾಕ್ಕೆ ಬಂದ ವೇಳೆ ಎಂ ಎಸ್ ಎಕುನ್ ರಾಜಕುಮಾರನಿಗೆ ರೆಸ್ಟೋರೆಂಟ್ ನಲ್ಲಿ ಕೆಲಸ ಕೊಟ್ಟು ತನ್ನ ಮನೆಯಲ್ಲಿ ನೆಲೆಸಲು ಸ್ಥಳಾವಕಾಶ ನೀಡಿದ್ದಾಳೆ.
ಇದಾದ ಬಳಿಕ ಅಕ್ಟೋಬರ್ 17, 2012 ರಂದು, ರಾಜಕುಮಾರ ಮತ್ತು ಅವನ ಸಹಚರ ಬೊಲೊಗುನ್ ಲಾಗೋಸ್ನ ಹೊರವಲಯದಲ್ಲಿರುವ ಓಜೋಡು ನೆರೆಹೊರೆಯಲ್ಲಿರುವ ತನ್ನ ಮನೆಯಲ್ಲಿ ಎಂ ಎಸ್ ಎಕುನ್ನನ್ನು ಕತ್ತು ಹಿಸುಕಿ ಕೊಂದಿದ್ದಾರೆ. ಆಕೆಯ ಕುಟುಂಬ ಆಕೆ ಇರುವ ಸ್ಥಳದ ಬಗ್ಗೆ ವಿಚಾರಿಸಿದಾಗ, ಎಂ.ಎಸ್. ಎಕುನ್ ಧಾರ್ಮಿಕ ಹಬ್ಬಕ್ಕಾಗಿ ಅಬುಜಾಗೆ ಪ್ರಯಾಣಿಸಿದ್ದಾಗಿ ರಾಜಕುಮಾರ ಅವರಿಗೆ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಹೈಕೋರ್ಟ್ ತಿಳಿಸಿದೆ.
ಎರಡು ತಿಂಗಳ ನಂತರ ಅಗ್ನಿಶಾಮಕದಳದವರು ಆಕೆಯ ಮನೆಯಲ್ಲಿ ಹುಡುಕಾಟ ನಡೆಸಿದ್ದರು. ನಂತರ ಬಾವಿ ಅಗೆಯುವವರು ಬಾವಿ ಅಗೆಯುವ ಕೆಲಸ ಮಾಡುವ ಸಂದರ್ಭದಲ್ಲಿ ಆಕೆಯ ಶವವನ್ನು ಪತ್ತೆ ಮಾಡಿದ್ದಾರೆ. ಇದಾದ ಬಳಿಕ ಏಪ್ರಿಲ್ 2015 ರಲ್ಲಿ ಇಕೆಜಾ ಹೈಕೋರ್ಟ್ನಲ್ಲಿ ಆರೋಪಿಗಳ ವಿಚಾರಣೆ ಪ್ರಾರಂಭವಾಗಿತ್ತು.
ಈ ಕೃತ್ಯದಲ್ಲಿ ನೈಜೀರಿಯಾ ರಾಜಕುಮಾರ ಅಡೆವಾಲೆ ಒಯೆಕಾನ್ ಹಾಗೂ ಆತನ ಸಹಚರ ಲತೀಫ್ ಬೊಲೊಗುನ್ ಶಾಮೀಲಾಗಿದ್ದರು. ಕೊಲೆಗೆ ಸಂಬಂಧಿಸಿ ವಿಚಾರಣೆ ನಡೆಸಿದಾಗ ಇಬ್ಬರೂ ಒಬ್ಬರಿಗೊಬ್ಬರು ತಿಳಿದಿಲ್ಲವೆಂದು ನಿರಾಕರಿಸಿದ್ದಾರೆ ತಾವು ಮೊದಲು ಪೊಲೀಸ್ ಠಾಣೆಯಲ್ಲಿ ಭೇಟಿಯಾಗಿದ್ದು ಎಂದು ಹೇಳಿಕೊಂಡಿದ್ದಾರೆ. ಬಳಿಕ ಯುನೈಟೆಡ್ ಸ್ಟೇಟ್ಸ್ನಲ್ಲಿ ವಾಸ್ತುಶಿಲ್ಪ ಅಧ್ಯಯನದಿಂದ ಹಿಂದಿರುಗಿದ ನಂತರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ರ್ಯಾಲಿಯ ಸಂದರ್ಭ ಎಂಎಸ್ ಎಕುನ್ ಅವರನ್ನು ಭೇಟಿ ಮಾಡಿದ್ದೇನೆ ಎಂದು ಪ್ರಿನ್ಸ್ ಅಡೆವಾಲೆ ನ್ಯಾಯಾಲಯಕ್ಕೆ ತಿಳಿಸಿದರು.
ಸೋಮವಾರ ಶಿಕ್ಷೆ ವಿಧಿಸುವ ಮೊದಲು, ಕೊಲೆಗಾರರ ರಕ್ಷಣಾ ಸಲಹೆಗಾರ ಒ. ಸಿ. ಒನ್ವುಮೆರಿ ಅವರು ವಕೀಲರ ಮನವೊಲಿಸಲು ಯತ್ನಿಸಿದಾಗ "ನಾನು ಶಿಕ್ಷೆಯನ್ನು ನ್ಯಾಯಾಲಯದ ಕೈಗೆ ಬಿಡುತ್ತೇನೆ" ಎಂದು ವಕೀಲರು ಹೇಳಿದ್ದರು.
ನ್ಯಾಯಾಲಯವು "ಪಿತೂರಿ ಮತ್ತು ಕೊಲೆ ಅಪರಾಧಗಳನ್ನು ಸಾಬೀತುಪಡಿಸಿದ್ದು, ಗಲ್ಲುಶಿಕ್ಷೆ ವಿಧಿಸಿದೆ.