ಚೀನಾ, ಡಿ 23 (Daijiworld News/MB) : ಹೊಟ್ಟೆಯೊಳಗೆ ಪಿನ್, ಮುಳ್ಳು ಮುಂತಾದವುಗಳು ಹೋಗಿರುವುದನ್ನು ನಾವು ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿಯ ಗುದದ್ವಾರದ ಮೂಲಕ ಬಾಟಲ್ ಹೊಕ್ಕಿದ್ದು ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಹೊರ ತೆಗೆದಿದ್ದಾರೆ.
60 ವರ್ಷ ಪ್ರಾಯದ ವೃದ್ಧನು 7 ಇಂಚಿನ ಬಾಟಲ್ನಿಂದ ಹಿಂಬಾಗದಲ್ಲಿ ಆಗಿದ್ದ ಕಜ್ಜಿಯನ್ನು ತುರಿಸುವ ಸಂದರ್ಭದಲ್ಲಿ ಬಾಟಲ್ ಆಕಸ್ಮಿಕವಾಗಿ ಗುದದ್ವಾರದ ಒಳಕ್ಕೆ ಹೊಕ್ಕಿ ನಡೆದಾಡಲು ತೊಂದರೆಯಾಗಿದೆ.
ಆತನ ಹೊಟ್ಟೆಯ ಸ್ಕಾನಿಂಗ್ ಮಾಡಿದ ನಂತರ ಡಾ.ಲಿನ್ ಜುನ್ ಅವರು ಶಸ್ತ್ರ ಚಿಕಿತ್ಸೆ ಮಾಡಿ ಆತನ ಗುದದ್ವಾರದಿಂದ ಹೊಕ್ಕು ಹೊಟ್ಟೆಗೆ ತಾಗಿದ್ದ ಬಾಟಲಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮೊದಲು ನವೆಂಬರ್ ತಿಂಗಳಲ್ಲಿ ರಾಮನಗರದಲ್ಲಿ ಓರ್ವ ವ್ಯಕ್ತಿಯ ಗುದದ್ವಾರದ ಮೂಲಕ ಪೊರಕೆ ಹಿಡಿ ಹೊಕ್ಕಿದ್ದು ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ. ಆದರೆ ಈ ಪೊರಕೆ ಗುದದ್ವಾರಕ್ಕೆ ಹೊಕ್ಕಿದ್ದಾದರು ಹೇಗೆ ಎಂಬುದೇ ಒಂದು ಪ್ರಶ್ನೆಯಾಗಿ ಉಳಿದಿದೆ.
ಹಾಗೆಯೇ ಇನ್ನೊಂದು ಘಟನೆಯಲ್ಲಿ 22 ವರ್ಷದ ಚೀನಾದ ಮಹಿಳೆ ತೂಕ ಕಡೆಮೆ ಮಾಡುವ ಉದ್ದೇಶದಿಂದ 30 ಸೆಂ.ಮೀ. ವಾಂತಿ ಮಾಡುವ ಟ್ಯೂಬ್ ಒಂದನ್ನು ಉಪಯೋಗಿಸಿದ್ದು ಅದನ್ನು ಆಕಸ್ಮಿಕವಾಗಿ ನುಂಗಿದ್ದಳು.
ಕಳೆದ ವರ್ಷ ದೆಹಲಿಯಲ್ಲಿ ಓರ್ವ ವ್ಯಕ್ತಿ ಹಲ್ಲು ಸ್ವಚ್ಛಗೊಳಿಸುವಾಗ ಬ್ರಷ್ ಅನ್ನೇ ನುಂಗಿ ಬಿಟ್ಟಿದ್ದರು. ಶಸ್ತ್ರ ಚಿಕಿತ್ಸೆ ನಡೆಸಿ ಅದನ್ನು ಹೊರ ತೆಗೆಯಲಾಯಿತು.