ಫಿಲಿಪೈನ್ಸ್, ಡಿ 24(Daijiworld News/MSP): ತೆಂಗಿನಕಾಯಿ ವೈನ್ ಕುಡಿದ ಪರಿಣಾಮ ಕನಿಷ್ಠ 11 ಜನರು ಸಾವನ್ನಪ್ಪಿ ಸುಮಾರು 300 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಫಿಲಿಪೈನ್ಸ್ನಲ್ಲಿ ನಡೆದಿದೆ.
ಫಿಲಿಪೈನ್ಸ್ನ ದಕ್ಷಿಣ ಮನಿಲಾದ ಎರಡು ಪ್ರಾಂತ್ಯಗಳಾದ ಲಗುನಾ ಮತ್ತು ಕ್ವಿಜೋನ್ನಲ್ಲಿ ಈ ಘಟನೆ ನಡೆದಿದ್ದು ಈ ಎರಡು ಪ್ರದೇಶ ಜನರು ಸ್ಥಳೀಯವಾಗಿ ಜನಪ್ರಿಯವಾಗಿರುವ ಪಾರ್ಟಿಗಳಲ್ಲಿ, ರಜೆಯ ಮಜಾಕ್ಕಾಗಿ ಸೇವಿಸುವ ತೆಂಗಿನಕಾಯಿ ವೈನ್ "ಲ್ಯಾಂಬಾನಾಗ್ ಎಂಬ ಪಾನೀಯವನ್ನು ಸೇವಿಸಿದ್ದರು. ಇದರಲ್ಲಿ ಹಲವಾರು ಮಂದಿ ಕ್ರಿಸ್ಮಸ್ ಪಾರ್ಟಿಯಲ್ಲಿ ಆಚರಿಸುತ್ತಿದ್ದವರು ಎಂದು ತಿಳಿದುಬಂದಿದೆ.
ಅಸ್ವಸ್ಥ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ತದ ಮಾದರಿ ಹಾಗೂ ಮತ್ತು ಉಳಿದಿರುವ ಲ್ಯಾಂಬನಾಗ್ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಿಸಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಲ್ಯಾಂಬನಾಗ್ ಸ್ಥಳೀಯ ಪಟ್ಟಣವೊಂದರಲ್ಲಿ ಉತ್ಪಾದಿಸಲಾಗಿತ್ತು ಎಂದು ತಿಳಿದುಬಂದಿದೆ.
ಸರ್ಕಾರ ಸಾಕಷ್ಟು ಎಚ್ಚರವಹಿಸಿದರೂ ಫಿಲಿಪೈನ್ಸ್ನಲ್ಲಿ ಲ್ಯಾಂಬನಾಗ್ ಪಾನೀಯ ಅನಿಯಂತ್ರಿತವಾಗಿ ಉತ್ಪಾದನೆಯಾಗುತ್ತಿದೆ.