ಸಿಂಗಾಪುರ, ಡಿ 26 (Daijiworld News/MSP): ಪ್ರಪಂಚದಲ್ಲಿಯೇ ಅತಿ ಹೆಚ್ಚು ನೌಕೆಗಳ ಸಂಚಾರವಿರುವಂಥ ಸಿಂಗಾಪುರ ಜಲಸಂಧಿಯಲ್ಲಿ ಕೇವಲ ನಾಲ್ಕು ದಿನಗಳ ಅವಧಿಯಲ್ಲಿ ಬರೋಬ್ಬರಿ 5 ಹಡಗುಗಳ ಮೇಲೆ ಕಡಲ್ಗಳ್ಳರು ದಾಳಿ ನಡೆಸಿದ್ದಾರೆ.
ಕಳೆದ ಸೋಮವಾರ ರಾತ್ರಿ ಇರಾಕ್ ನ ಬಸ್ರಾಹ್ ನಿಂದ ಸಿಂಗಾಪುರ ಜಲಸಂಧಿ ಮಾರ್ಗವಾಗಿ ಚೀನಾ ಕಿಂಗ್ ಡಾವೋನತ್ತ ಚಲಿಸುತ್ತಿದ್ದ 105,000 ಟನ್ ಕಚ್ಚಾ ತೈಲ ಸಾಗಿಸುತ್ತಿದ್ದ ನೌಕೆ ಮೇಲೆ ದಾಳಿ ಕಡಲ್ಗಳ್ಳರು ದಾಳಿ ನಡೆಸಿದ್ದಾರೆ.
ಈ ಘಟನೆ ನಡೆದ ಎರಡೇ ಗಂಟೆಯಲ್ಲಿ ಮತ್ತೊಂದು ನೌಕೆಯ ಮೇಲೆ ದಾಳಿ ನಡೆದಿದೆ. ಕಚ್ಚತೈಲ ಸಾಗಿಸುತ್ತಿದ್ದ ಹಾಗೂ ಮತ್ತೊಂದು ನೌಕೆಯಲ್ಲಿದ್ದ ಸಿಬಂದಿಯನ್ನು ಕಟ್ಟಿಹಾಕಿದ್ದ ಕಡಲ್ಗಳ್ಳರು, ದರೋಡೆಗೆ ವಿಫಲ ಯತ್ನ ನಡೆಸಿದ್ದರು.
ಆದರೆ, ಕಡಲ್ಗಳ್ಳರು ದರೋಡೆಗೆ ಯತ್ನಿಸಿದಾಗ ಹಡಗಿನಲ್ಲಿದ್ದ ಎಚ್ಚರಿಯ ಅಲರ್ಮ್ ಮೊಳಗಿದ ಕಾರಣ ದರೋಡೆ ಯತ್ನ ಫಲಕಾಣಲಿಲ್ಲ. ಇದಲ್ಲದೆ ಡಿ.20ರಂದು 3 ಕಡಲ್ಗಳ್ಳತನ ಘಟನೆ ನಡೆದಿತ್ತು. 2019ರಲ್ಲಿ ಸಿಂಗಾಪುರ ಜಲಸಂಧಿಯಲ್ಲಿ ಒಟ್ಟಾರೆ ಇಂಥ 29 ಪ್ರಕರಣಗಳು ವರದಿಯಾಗಿವೆ.