ಇಸ್ಲಮಾಬಾದ್, ಡಿ 28(Daijiworld News/PY) : ಚಳಿಗಾಲದ ರಜಾದಿನಗಳಲ್ಲಿ ಪೂರ್ಣ ಪೀಠದ ಅಲಭ್ಯತೆಯನ್ನು ಉಲ್ಲೇಖಿಸಿ ದೇಶದ್ರೋಹ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ವಿರುದ್ದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಸಲ್ಲಿಸಿದ್ದ ಅರ್ಜಿಯನ್ನು ಲಾಹೋರ್ ಹೈಕೋರ್ಟ್ ಶುಕ್ರವಾರ ಹಿಂಪಡೆದಿದೆ.
ದೇಶದ್ರೋಹ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ವಿರುದ್ದ ಪರ್ವೇಜ್ ಮುಷರಫ್ ಖವಾಝ ಅಹ್ಮದ್ ತಾರೀಕ್ ರಹೀಮ್ ಹಾಗೂ ಅಜರ್ ಸಿದ್ದೀಕ್ ಅವರನ್ನೊಳಗೊಂಡ ಕಾನೂನು ಸಮಿತಿಯು ಸಿಪಿಸಿ ಸೆಕ್ಷನ್ 151ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು.
ಮುಶ್ರಫ್ ಸಲ್ಲಿಸಿದ ಅರ್ಜಿ ವಿಚಾರಣೆಯ ವೇಳೆ ಪೀಠದಲ್ಲಿ ಯಾರೂ ಹಾಜರಿರದ ಕಾರಣದಿಂದ ರಿಜಿಸ್ಟ್ರಾರ್ ಕಛೇರಿಯು ಅರ್ಜಿಯನ್ನು ಹಿಂದಿರುಗಿಸಿದ್ದು, ವಿಚಾರಣೆಯನ್ನು ಜನವರಿ 9ಕ್ಕೆ ಮುಂದೂಡಲಾಗಿದೆ ಎಂದು ವಕೀಲ ಸಿದ್ದೀಕ್ ಡಾನ್ಗೆ ತಿಳಿಸಿದ್ದಾರೆ.
ವಿಚಾರಣೆಗೆ ನೀಡಿದ ಅರ್ಜಿಯು 85ಪುಟವನ್ನು ಹೊಂದಿದ್ದು ಈ ವಿಚಾರವಾಗಿ ಪರ್ವೇಜ್ ಮುಶ್ರಫ್ಗೆ ಯಾವುದೇ ರೀತಿಯ ವಾದ ಮಾಡಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
2007ರಲ್ಲಿ ನವೆಂಬರ್ 3ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಪ್ರಕರಣ ಸಂಬಂಧ ನವೆಂಬರ್ 19ರಂದು ಕೋರ್ಟ್ ಎಲ್ಲ ವಿಚಾರಣೆಗಳನ್ನು ಮುಗಿಸಿದ್ದು, ಬಳಿಕ ಪಾಕಿಸ್ತಾನದ ವಿಶೇಷ ನ್ಯಾಯಾಲಯವು ಡಿ.17ರಂದು ಪರ್ವೇಜ್ ಮುಶ್ರಫ್ಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.