ದುಬೈ, ಡಿ 30 (Daijiworld News/ PY): ದುಬೈನ ಶಾರ್ಜಾದ ಹೊಟೇಲ್ನ ಕೊಠಡಿಯೊಂದರಲ್ಲಿ 33ವರ್ಷದ ಭಾರತೀಯ ವ್ಯಕ್ತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಮೃತ ವ್ಯಕ್ತಿಯು ಒಂದು ರಾತ್ರಿಯ ಅವಧಿಗೆ ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದನು. ಕೊಠಡಿ ಪಡೆದುಕೊಂಡು ಅವಧಿ ಮುಗಿದರೂ ಆ ವ್ಯಕ್ತಿ ಹೊರಕ್ಕೆ ಬಾರದಿದ್ದಾಗ ಅಲ್ಲಿಯ ಸಿಬ್ಬಂದಿ ಆ ವ್ಯಕ್ತಿಯನ್ನು ಕರೆಯಲು ಕೊಠಡಿಗೆ ತೆರಳಿ ಬಾಗಿಲು ತೆಗೆದಾಗ ಸ್ನಾನದ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.