ಬಾಗ್ದಾದ್, ಜ 3(Daijiworld News/MSP):ಇರಾನ್ನ ಇಸ್ಲಾಮಿಕ್ ರಿಪಬ್ಲಿಕನ್ ಕುಡ್ಸ್ ಪೋರ್ಸ್ನ ಮುಖ್ಯಸ್ಥ ಜನರಲ್ ಖಾಸೆಂ ಸೊಲೆಮಾನಿ ಮತ್ತು ಇತರರ ಸಾವಿಗೆ ಕಾರಣವಾಗಿರುವ ಅಮೆರಿಕ ಸೇನಾಪಡೆಗಳ ವೈಮಾನಿಕ ದಾಳಿಗೆ ಇರಾನ್ ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಸೇನಾಧಿಕಾರಿ ಹತ್ಯೆಯ ಬಳಿಕ ಆಕ್ರೋಶಗೊಂಡಿರುವ ಇರಾನ್ ಪರಮೋಚ್ಚ ನಾಯಕ ಅಯತೊಲಿಲ್ಲಾ ಅಲ್ ಖಮೇನಿ ಪಾರ್ಸಿ ಭಾಷೆಯಲ್ಲಿ ಇಂದು ಬೆಳಗ್ಗೆ ಟ್ವಿಟ್ ಮಾಡಿ , "ಅಮೆರಿಕ ದುಸ್ಸಾಹಸಗಳಿಗೆ ಭಾರೀ ಬೆಲೆ ತೆರಬೇಕಾದಿತು, ರಕ್ತಪಾತದ ಪ್ರತಿಕಾರ ನಿಮಗೆ ಕಾದಿದೆ,ಅಮೆರಿಕ ಸೇನಾಪಡೆ ದಾಳಿಯಲ್ಲಿ ನಮ್ಮ ಅತ್ಯಂತ ಧಕ್ಷ ಮತ್ತು ಸಮರ್ಥ ಸೇನಾ ಅಗ್ರನಾಯಕ ಹುತಾತ್ಮರಾಗಿದ್ದಾರೆ. ಅವರ ತ್ಯಾಗ ವ್ಯರ್ಥವಾಗಲು ನಾವು ಬಿಡುವುದಿಲ್ಲ, ಕ್ರಿಮಿನಲ್ಗಳಿಗೆ ರಕ್ತಪಾತದ ಮೂಲಕವೇ ನಾವು ಉತ್ತರ ಕೊಡುತ್ತೇವೆ" ಎಂದು ಎಚ್ಚರಿದ್ದಾರೆ
ಸೊಲೆಮಾನಿ ಹತ್ಯೆ ಹಿನ್ನೆಲೆಯಲ್ಲಿ ಅವರು ಇರಾನ್ನಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಿದ್ದಾರೆ.ಬಹುತೇಕ ಇರಾನ್ನ ಎಲ್ಲಾ ನಾಯಕರು ಮತ್ತು ಸೇನಾಪಡೆಗಳ ಮಾಜಿ ಮುಖ್ಯಸ್ಥರು ಅಮೆರಿಕದ ದಾಳಿಯನ್ನು ಖಂಡಿಸಿದ್ದಾರೆ. ಸೋಲಿಮನಿ ಅವರ ಹತ್ಯೆಯಿಂದ ಅಮೇರಿಕಾ ಮತ್ತು ಇರಾನ್ ಸಂಬಂಧ ಸಂಪೂರ್ಣ ಹಳಸಿದಂತಾಗಿದೆ