ಬಾಗ್ದಾದ್, (Daijiworld News/MSP): ಇರಾನ್ ಅತ್ಯುನ್ನತ ಸೇನಾ ಕಮಾಂಡರ್ ಖಾಸಿಂ ಸೋಲೆಮನಿ ರನ್ನು ಅಮೆರಿಕಾ ಪಡೆಗಳು ವೈಮಾನಿಕ ದಾಳಿಯಲ್ಲಿ ಕೊಂದು ಹಾಕಿದ ಬೆನ್ನಲ್ಲೇ ಮತ್ತೆ ವಾಯುದಾಳಿ ನಡೆಸಿದೆ ಎಂದು ವರದಿಯಾಗಿದೆ.
ಶನಿವಾರ ಮುಂಜಾನೆ ಇರಾಕ್ ನ ಹಶೆಬ್ ಅಲ್ ಶಾಬಿ ಅರೆಸೇನಾ ಪಡೆಯ ವಾಹನಗಳ ಅಮೇರಿಕಾ ದಾಳಿ ನಡೆಸಿದ್ದು, ಈ ದಾಳಿಯ ಪರಿಣಾಮ ಸುಮಾರು ಆರು ಜನರು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಖಾಸಿಂ ಸೋಲೆಮನಿ ಹತ್ಯೆಯಿಂದ ಅಕ್ರೋಶಗೊಂಡಿದ್ದ ಇರಾನ್ ಅತ್ಯುಗ್ರವಾಗಿ ರಕ್ತಪಾತದ ಮೂಲಕವೇ ಅಮೆರಿಕಾ ವಿರುದ್ದ ಸೇಡು ತೀರಿಸಿಕೊಳ್ಳುವುದಾಗಿ ಅಬ್ಬರಿಸಿತ್ತು.
ಖಾಸಿಂ ಸೊಲೇಮನಿ ಮತ್ತು ಅಬು ಮೆಹದಿ ಅಲ್ ಮುಹಂದಿಸ್ ಸೇರಿದಂತೆ ಸಾವನ್ನಪ್ಪಿರುವವರ ಅಂತಿಮ ಯಾತ್ರೆಗೆ ಸಿದ್ದತೆ ನಡೇಯುತ್ತಿರುವಂತೆ ಅಮೆರೀಕಾ ಶನಿವಾರ ಮುಂಜಾನೆ ವಾಹನಗಳನ್ನು ಗುರಿಯಾಗಿಸಿ ನಡೆದ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ಇನ್ನೊಂದೆಡೆ ಇರಾನ್ ನಿಂದ ಪ್ರತಿಕಾರ ಘೋಷಣೆ ಕೇಳಿಬರುತ್ತಿದ್ದಂತೆ ಅಮೇರಿಕಾ ಇರಾನ್ ನಲ್ಲಿರುವ ತನ್ನ ಪ್ರಜೆಗಳಿಗೆ ಕೂಡಲೇ ಅಲ್ಲಿಂದ ತೆರಳಬೇಕು ವಿಮಾನಯಾನವಿಲ್ಲದಿದ್ದರೆ ಭೂಮಾರ್ಗದ ಮೂಲಕ ಹೊರಬನ್ನಿ ಎಂದು ಕರೆನೀಡಿದೆ.