ಸ್ಯಾನ್ ಫ್ರಾನ್ಸಿಸ್ಕೋ, ಜ 04 (Dajiworld News/MB) : ತನಗೆ ಕ್ರಿಸ್ಮಸ್ ಉಡುಗೊರೆಯಾಗಿ ದೊರಕಿದ್ದ ಆಪಲ್ ಏರ್ಪೋಡ್ನ್ನು 7 ವರ್ಷದ ಬಾಲಕನು ಆಕಸ್ಮಿಕವಾಗಿ ನುಂಗಿದ್ದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ ಘಟನೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದಿದೆ.
ಆತನನ್ನು ಅಟ್ಲಾಂಟಾದ ಮಕ್ಕಳ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ವೈದ್ಯರು ಆತನ ಹೊಟ್ಟೆಯ ಸ್ಕ್ಯಾನಿಂಗ್ ಮಾಡಿ ಹೊಟ್ಟೆಯಲ್ಲಿ ಏರ್ಪೋಡ್ ಇರುವುದು ಖಾತರಿ ಪಡಿಸಿದ್ದಾರೆ.
ಬಾಲಕನ ತಾಯಿ ಆ ಏರ್ಪೋಡ್ ಇನ್ನೆರಡು ದಿನಗಳಲ್ಲಿ ತಾನಾಗಿಯೇ ಗುದದ್ವಾರದ ಮೂಲಕ ಹೊರ ಬರುತ್ತದೆ ಎಂಬ ಕಾರಣಕ್ಕೆ ಯಾವುದೇ ಚಿಕಿತ್ಸೆ ಮಾಡಲು ಮಂದಾಗಿಲ್ಲ ಎಂದು ತಿಳಿಸಿದ್ದಾರೆ.
ಏರ್ಪೋಡ್ ನುಂಗಿದ ಬಳಿಕ ಬಾಲಕ ಯಾವುದೇ ಗಾಯ ಅಥವಾ ಅನಾರೋಗ್ಯಕ್ಕೆ ಒಳಗಾದ ಕುರಿತು ಈವರೆಗೂ ಯಾವುದೇ ವರದಿಯಾಗಿಲ್ಲ. ಬಾಲಕ ಈಗ ಶಸ್ತ್ರ ಚಿಕಿತ್ಸೆ ನಂತರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾನೆ.
ಈ ಕುರಿತು ಬಾಲಕನ ತಾಯಿ ಕೈರಾ ಸ್ಟಾಡ್ "ನಾವು ಆತನಿಗೆ ಈ ವಿಷಯಕ್ಕೆ ಸಂಬಂಧಿಸಿ ಬೈಯಲಿಲ್ಲ, ಯಾಕೆ ಹೀಗೆ ಮಾಡಿದೆ ಎಂದು ಕೇಳಲಿಲ್ಲ, ಅವನಿಗೆ ಅವಮಾನ ಮಾಡಲಿಲ್ಲ, ಅವನಲ್ಲಿ ಪ್ರಶ್ನೆ ಕೇಳಿ ಅವನನ್ನು ಇನ್ನಷ್ಟು ಕುಗ್ಗಿಸಲಿಲ್ಲ. ಅವನು ಈ ಘಟನೆಯಿಂದ ಭಯಪಟ್ಟಿದ್ದ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ. ನಾವು ಆತ ವಿಶ್ರಾಂತಿ ಪಡೆಯಲು ಶಾಂತವಾಗರಲು ಸಹಾಯ ಮಾಡಿದೆವು. ಇದು ಅವನಿಗೆ ಸಹಾಯವಾಗಿದೆ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಏರ್ಪೋಡ್ ನುಂಗಿರುವ ಪ್ರಕರಣ ಇದೇ ಮೊದಲು ನಡೆದದ್ದಲ್ಲ. ಕಳೆದ ವರ್ಷ ಓರ್ವ ತೈವಾನೀಸ್ ವ್ಯಕ್ತಿ ಆಕಸ್ಮಿಕವಾಗಿ ಏರ್ಪೋಡ್ನ್ನು ನುಂಗಿದ್ದು ಆತನ ಗುದದ್ವಾರದ ಮೂಲಕ ಹೊರಬಂದ ನಂತರವೂ ಆ ಏರ್ಪೋಡ್ ಕಾರ್ಯ ನಿರ್ವಹಿಸುತ್ತಿತ್ತು.