ಅಮೇರಿಕಾ, ಜ 04(Daijiworld News/MSP): ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ದ ಲೈಂಗಿಕ ಕಿರುಕುಳ ಆರೋಪ ಕೇಳಿಬರುತ್ತಿರುವುದು ಇದೇ ಮೊದಲಲ್ಲ. ಈ ಆರೋಪ ಪಟ್ಟಿಗೆ ಅಮೆರಿಕಾದ ಖ್ಯಾತ ನಿರೂಪಕಿ ಸೇರಿದ್ದಾರೆ.
ಫಾಕ್ಸ್ ನ್ಯೂಸ್ ನಲ್ಲಿ ನಿರೂಪಕಿಯಾಗಿರುವ ಕರ್ಟನಿ ಫ್ರಿಯೆಲ್ ಬರೆದಿರುವ ಆತ್ಮಚರಿತ್ರೆಯಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗುವ ಮೊದಲು ತನ್ನೊಂದಿಗೆ ತಪ್ಪಾಗಿ ವರ್ತಿಸಿದ್ದರು ಎಂದು ಬರೆದುಕೊಂಡಿದ್ದಾರೆ.
"ಟುನೈಟ್ ಅಟ್ 10: ಕಿಕ್ಕಿಂಗ್ ಬೂಜ್ ಮತ್ತು ಬ್ರೇಕಿಂಗ್ ನ್ಯೂಸ್" ಎಂಬ ಆತ್ಮಚರಿತ್ರೆ ಬರೆದಿದ್ದು, ಇದರಲ್ಲಿ ಡೊನಾಲ್ಡ್ ಟ್ರಂಪ್ ಆಡಿರುವ ಮಾತುಗಳನ್ನು ಉಲ್ಲೇಖಿಸಿದ್ದಾರೆ.
ಫ್ರಿಯೆಲ್ ಅವರಿಗೆ ಕರೆ ಮಾಡಿರುವ ಟ್ರಂಪ್ " ಫಾಕ್ಸ್ ನ್ಯೂಸ್ನಲ್ಲಿ ಅತ್ಯಂತ ಹಾಟೆಸ್ಟ್ ಹುಡುಗಿ ನೀನು, ನೀವು ಕೆಲವೊಮ್ಮೆ ನನ್ನ ಕಚೇರಿಗೆ ಬರಬೇಕು. ಬಂದರೆ ನಾವಿಬ್ಬರು ಕಿಸ್ ಮಾಡಬಹುದು" ಎಂದು ಹೇಳಿದ್ದಾರೆ. ಅವರ ಮಾತಿಗೆ ಪ್ರತಿಕ್ರಿಯಿಸಿರುವ ಫ್ರಿಯೆಲ್ "ನಾವಿಬ್ಬರೂ ವಿವಾಹಿತರಾಗಿರುವವರು ನೆನೆಪಿರಲಿ" ಎಂದು ಟ್ರಂಪ್ಗೆ ತಿಳಿಸಿದ ನಂತರ ಅವರು ಕರೆ ಕೊನೆಗೊಳಿಸಿದ್ದಾರೆ ಎಂದು ಫ್ರಿಯೆಲ್ ಹೇಳಿದ್ದಾರೆ.