ಮಾಸ್ಕೋ, ನ.18 (DaijiworldNews/AK): ದಕ್ಷಿಣ ರಷ್ಯಾದ ನೈಋತ್ಯ ಸೈಬೀರಿಯಾದ ಕೆಮೆರೊವೊ ಪ್ರದೇಶದಲ್ಲಿ ಸೇನಾ ಸಾರಿಗೆ ವಿಮಾನ ಪತನಗೊಂಡಿದ್ದು, 17 ಮಂದಿ ಸಾವನ್ನಪ್ಪಿದ್ದಾರೆ.

ಮಂಗಳವಾರ (ನ.17) ಮಿಲಿಟರಿ An-12 ಸಾರಿಗೆ ವಿಮಾನ ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲಾ 17 ಜನರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ಮಾಧ್ಯಮ ಸಂಸ್ಥೆ ಇಜ್ವೆಸ್ಟಿಯಾ ವರದಿ ಮಾಡಿದೆ.
ಯಾಗುನೊವೊ ಗ್ರಾಮದ ಬಳಿ ಈ ವಿಮಾನ ಪತನಗೊಂಡಿದೆ. ಅದರಲ್ಲಿದ್ದ ಎಲ್ಲಾ 17 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಅವರು ಅಪಘಾತಕ್ಕೀಡಾದ ವಿಮಾನ ಯಾವುದು ಎಂಬುದರ ಬಗ್ಗೆ ತಿಳಿದಿಲ್ಲ.