ಮೆಲ್ಬರ್ನ್, ಜ.05 (Daijiworld News/PY) : ತಿಂಗಳ ಹಿಂದೆ ಆಸ್ಟ್ರೇಲಿಯಾದ ಪ್ರವಾಸಿ ತಾಣಕ್ಕೆ ಕಾಡ್ಗಿಚ್ಚು ಹತ್ತಿಕೊಂಡಿತ್ತು, ಆದರೆ ದಿನೇ ದಿನೇ ಕಾಡ್ಗಿಚ್ಚು ಹೆಚ್ಚಾಗುತ್ತಿದೆಯೇ ಹೊರತು ಇನ್ನು ನಿಯಂತ್ರಣಕ್ಕೆ ಬಂದಿಲ್ಲ.
ಅಲ್ಲದೇ ಪ್ರವಾಸಿ ತಾಣಕ್ಕೆ ಕಾಡ್ಗಿಚ್ಚು ಹತ್ತಿಕೊಂಡ ಪರಿಣಾಮ ಇದರ ನಡುವೆ ಸಿಲುಕಿರೋ ಸಂತ್ರಸ್ತರ ಸಂಖ್ಯೆ ಏರುತ್ತಲೇ ಇದೆ.
ಆದರೆ ಭಾರತಿಯ ಮೂಲದ ದಂಪತಿಯೊಂದು ಕಾಡ್ಗಿಚ್ಚು ಸಂತ್ರಸ್ತರಿಗೆ ಉಚಿತ ಊಟ ನೀಡುತ್ತಿದ್ದಾರೆ.
ವಿಕ್ಟೊರಿಯಾದಲ್ಲಿ ದೆಸಿ ಗ್ರಿಲ್ ರೆಸ್ಟೋರೆಂಟ್ ನಡೆಸುತ್ತಿರುವ ಕಮಲಜೀತ್ ಕೌರ್ ಹಾಗೂ ಆಕೆಯ ಪತಿ ಕನ್ವಲ್ ಜೀತ್ ಕಳೆದ ಕೆಲವು ದಿನಗಳಿಂದ ಸಂತ್ರಸ್ತರಿಗೆ ಉಚಿತ ಊಟ ನೀಡುತ್ತಿದ್ದಾರೆ. ತಮ್ಮ ಹೋಟೆಲ್ನಲ್ಲಿ ಅನ್ನ ಮತ್ತು ಸಾರು ತಯಾರಿಸಿ ಅದನ್ನು ಪರಿಹಾರ ಕೇಂದ್ರಗಳಿಗೆ ನೀಡುತ್ತಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಹಬ್ಬಿರುವ ಕಾಡ್ಗಿಚ್ಚಿನಿಂದಾಗಿ ವಿಕ್ಟೋರಿಯಾದಲ್ಲಿ ಹೆಚ್ಚಿನ ಪ್ರಮಾಣದ ಹಾನಿಯಾಗಿದ್ದು, ಉಳಿದಂತೆ ನ್ಯೂ ಸೌತ್ ವೇಲ್ಸ್ ಮತ್ತು ಸೌತ್ ಆಸ್ಟ್ರೇಲಿಯಾದಲ್ಲಿ ಕೂಡಾ ಕಾಡ್ಗಿಚ್ಚು ಹೆಚ್ಚಿನ ಹಾನಿ ಉಂಟುಮಾಡಿದೆ.
ಆಸ್ಟ್ರೇಲಿಯಾದಲ್ಲಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗಡುತ್ತಿದ್ದು, ಇದರಿಂದ ಸುಮಾರು ಫ್ಲಿಂಡರ್ಸ್ ಚೇಸ್ ರಾಷ್ಟ್ರೀಯ ಉದ್ಯಾನದ ಸುಮಾರು 14,000 ಹೆಕ್ಟೇರ್ಸ್ ಜಾಗ ಹೊತ್ತಿ ಉರಿದಿದೆ.