ಬಾಗ್ದಾದ್, ಜ 06 (Daijiworld News/MSP): ಇರಾನ್ ಸೇನಾ ಕಮಾಂಡರ್ ಕಾಸಿಂ ಸುಲೈಮಾನಿ ಹತ್ಯೆಗೈದಿರುವ ಅಮೇರಿಕಾ ಮೇಲೆ ಇರಾನ್ ಪ್ರತೀಕಾರ ತೀರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಅಮೇರಿಕಾದ ಮೇಲೆ ಯುದ್ದಕ್ಕೆ ಮುಂದಾದರೆ ಮರುಕ್ಷಣವೇ ಇರಾನ್ ನಿರ್ನಾಮವಾಗುವುದು ಖಚಿತ. ಇರಾನ್’ನ 52 ನೆಲೆಗಳನ್ನು ಈಗಾಗಲೇ ಗುರುತಿಸಿದ್ದು ದಾಳಿ ನಡೆಸುತ್ತೇವೆ ಎಂದು ಟ್ರಂಪ್ ಇರಾನ್ ಗೆ ಟ್ವೀಟ್ ಮೂಲಕ ಎಚ್ಚರಿಸಿದ್ದಾರೆ.
ಅಮೇರಿಕಾ ವಿರುದ್ದ ಬುಸುಗುಡುತ್ತಿರುವ ಇರಾನ್ ರಕ್ತಪಾತದ ಪ್ರತಿಕಾರ ಎಂದು ಘೋಷಿಸಿದ್ದು ಇದರ ದ್ಯೋತಕವಾಗಿ ಮಸೀದಿಯ ಗುಮ್ಮಟದ ಮೇಲೆ ಕೆಂಪು ಬಾವುಟ ಹಾರಿಸಿ ಮತ್ತಷ್ಟು ಯುದ್ದೋತ್ಸಾಹ ತೋರಿದೆ. ಮಸೀದಿ ಮೇಲೆ ಕೆಂಪು ಪಾತಕೆ ಹಾರುತ್ತಿದೆ ಎಂದರೆ ಶಿಯಾ ಸಂಪ್ರದಾಯದ ಪ್ರಕಾರರಕ್ತಪಾತ ಸಹಿತ ಪ್ರತೀಕಾರ ತೆಗೆದುಕೊಳ್ಳುವುದರ ಸೂಚನೆಯಾಗಿದೆ. ಶಿಯಾ ಸಂಪ್ರದಾಯದ ಪ್ರಕಾರ, ಈ ರೀತಿ ಮಸೀದಿ ಮೇಲೆ ಕೆಂಪುಬಾವುಟ ಹಾರಿಸುವುದು ರಕ್ತಪಾತ ಸಹಿತ ಪ್ರತೀಕಾರ ತೆಗೆದುಕೊಳ್ಳುವುದರ ಸೂಚನೆಯಾಗಿದೆ. ಟೆಹ್ರಾನ್ ನಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಖೋಮ್ ನಗರದ ಜಮಕರನ್ ಮಸೀದಿಯ ಗುಮ್ಮಟದ ಮೇಲೆ ರಕ್ತವರ್ಣದ ಬಾವುಟ ಹಾರಿಸುವ ಮೂಲಕ ಪ್ರತೀಕಾರ ಕೈಗೊಳ್ಳುವ ಕುರಿತು ಬಹಿರಂಗ ಸಂದೇಶ ರವಾನಿಸಿದೆ.
ದಾಳಿಯಿಂದ ಮೃತಪಟ್ಟಿರುವ ಇರಾನ್ ಸೇನಾ ಕಮಾಂಡರ್ ಕಾಸಿಂ ಸುಲೈಮಾನಿ ಅವರ ಪುತ್ರಿ," ತಮ್ಮ ತಂದೆಯ ಸಾವಿಗೆ ಯಾರು ಪ್ರತೀಕಾರ ತೀರಿಸಿಕೊಳ್ಳುತ್ತಾರೆಂದು ಎಂದು ಇರಾನ್ ಅಧ್ಯಕ್ಷ ರೌಹಾನಿಯವರನ್ನು ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸಿರುವ ರೌಹಾನಿ ’ಪ್ರತೀಕಾರ ಶೀಘ್ರವೇ ತೀರಿಸಿಕೊಳ್ಳುತ್ತೇವೆಂದು ಆಕೆಗೆ ಧೈರ್ಯ ಹೇಳಿದ್ದಾರೆ ವರದಿಗಳು ತಿಳಿಸಿವೆ.