ವಾಷಿಂಗ್ಟನ್, ಜ 7 (Daijiworld News/MB) : ಅಮೆರಿಕಾ ಹಾಗೂ ಇರಾನ್ ನಡುವಿನ ಸಮರ ಇನ್ನಷ್ಟು ಹೆಚ್ಚಾಗುತ್ತಲ್ಲೇ ಇದ್ದು, "ಇರಾನ್ ರಾಷ್ಟ್ರ ಮುಂದೆ ಎಂದೂ ಕೂಡಾ ಪರಮಾಣು ಶಸ್ತ್ರಾಸ್ತ್ರ ಹೊಂದುವುದಿಲ್ಲ, ಪರಮಾಣು ಶಸ್ತ್ರಾಸ್ತ್ರ ಹೊಂದಲು ನಾವು ಬಿಡುವುದಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಇತ್ತ ಇರಾನ್ ಅಮೆರಿಕಾದ ವಿರುದ್ಧ ಪ್ರತಿದಾಳಿ ನಡೆಸುವ ತಯಾರಿಯಲ್ಲಿ ಇದ್ದು ಅತ್ತ ಅಮೆರಿಕಾ ಇರಾನ್ನ ವಿರುದ್ಧ ಕಿಡಿಕಾರುತ್ತಿದೆ.
ಅಮೆರಿಕಾ ಇರಾನ್ ಉನ್ನತ ಸೇನಾಧಿಕಾರಿ ಖಾಸಿಂ ಸುಲೈಮಾನಿಯನ್ನು ವಾಯುದಾಳಿ ನಡೆಸಿ ಹತ್ಯೆ ಮಾಡಿದ ನಂತರ ಯುದ್ಧದ ವಾತಾವರಣ ಕಂಡುಬಂದಿದ್ದು, ಭಾರತ ಸೇರಿದಂತೆ ವಿಶ್ವದ ಅರ್ಥ ವ್ಯವಸ್ಥೆ ಮೇಲೆ ಭಾರೀ ದುಷ್ಪರಿಣಾಮವನ್ನು ಬೀರಿದೆ.
ಹಾಗೆಯೇ ಇರಾನ್ ಸೊಲೈಮನಿ ಹತ್ಯೆಗೆ ಪ್ರತೀಕಾರವಾಗಿ ಡೊನಾಲ್ಡ್ ಟ್ರಂಪ್ ತಲೆಗೆ 575 ಕೋಟಿ ರೂ. ಬಹುಮಾನ ಘೋಷಿಸಿದೆ. ಇರಾನಿನಲ್ಲಿ 80 ಮಿಲಿಯನ್ ಜನರಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ 1 ಡಾಲರ್ ನೀಡಿದರೂ ಅದು ಸುಮಾರು 575 ಕೋಟಿ ರುಪಾಯಿ ಆಗಲಿದೆ. ಈ ಹಣವನ್ನು ಟ್ರಂಪ್ ಹತ್ಯೆಗೈಯುವವರಿಗೆ ನೀಡಲಾಗುವುದು ಎಂದು ಘೋಷಿಸಿರುವುದಾಗಿ ವರದಿ ವಿವರಿಸಿದೆ.