ವಾಷಿಂಗ್ಟನ್, ಜ 7 (Daijiworld News/MB) : ಭಾರತೀಯ ಮೂಲದ ಇಬ್ಬರು ಮಹಿಳೆಯರನ್ನು ನ್ಯೂಯಾರ್ಕ್ ಕ್ರಿಮಿನಲ್ ಕೋರ್ಟ್ ಹಾಗೂ ಸಿವಿಲ್ ಕೋರ್ಟ್ನ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದೆ.
ಜಡ್ಜ್ ಅರ್ಚನಾ ರಾವ್ ಅವರನ್ನು ನ್ಯೂಯಾರ್ಕ್ನ ಕ್ರಿಮಿನಲ್ ಕೋರ್ಟ್ ನ ನ್ಯಾಯಾಧೀಶರನ್ನಾಗಿ ಹಾಗೂ ಜಡ್ಜ್ ದೀಪಾ ಅಂಬೇಕರ್ ಅವರನ್ನು ನ್ಯೂಯಾರ್ಕ್ ಸಿವಿಲ್ ಕೋರ್ಟ್ ನೇಮಕ ಮಾಡಲಾಗಿದೆ.
2019ರ ಜವರಿಯಲ್ಲಿ ಅರ್ಚನಾ ರಾವ್ ಅವರನ್ನು ಇಂಟರೀಮ್ ಸಿವಿಲ್ ಕೋರ್ಟ್ ನ ನ್ಯಾಯಾಧೀಶರನ್ನಾಗಿ ಆಯ್ಕೆ ಮಾಡಲಾಗಿತ್ತು. ಇದಕ್ಕೂ ಮೊದಲು ನ್ಯೂಯಾರ್ಕ್ ಡಿಸ್ಟ್ರಿಕ್ಟ್ ಅಟಾರ್ನಿ ಕಚೇರಿಯಲ್ಲಿ 17 ವರ್ಷಗಳ ಕಾಲ ಕಾರ್ಯ ನಿರ್ವಹಿಸಿರುವ ಇವರನ್ನು ಈಗ ಕ್ರಿಮಿನಲ್ ಕೋರ್ಟ್ ನ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿದೆ.
ಅರ್ಚನಾ ರಾವ್ ಅವರು ನ್ಯೂಯಾರ್ಕ್ ನ ವಸ್ಸಾರ್ ಕಾಲೇಜಿನಲ್ಲಿ ಪದವಿ ಪಡೆದಿದ್ದು, ಫೋರ್ಧಂ ಯೂನಿರ್ವಸಿಟಿ ಸ್ಕೂಲ್ ಆಫ್ ಲಾನಲ್ಲಿ ಜ್ಯೂರಿಸ್ ಡಾಕ್ಟರೇಟ್ ಪಡೆದಿದ್ದರು.
ಅಂಬೇಕರ್ ಅವರು 2018ರಲ್ಲಿ ಇಂಟರೀಮ್ ಸಿವಿಲ್ ಕೋರ್ಟ್ನ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸುತ್ತಿದ್ದು ಇದೀಗ ನ್ಯೂಯಾರ್ಕ್ ಸಿವಿಲ್ ಕೋರ್ಟ್ಗೆ ನೇಮಕ ಮಾಡಲಾಗಿದೆ.
ಅಂಬೇಕರ್ ಕೂಡಾ ಕಾನೂನು ಸಲಹಾ ಸೊಸೈಟಿಯಯಲ್ಲಿ ಅಟಾರ್ನಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ್ದರು. ಅಂಬೇಕರ್ ಮಿಚಿಗನ್ ಯೂನಿರ್ವಸಿಟಿಯಲ್ಲಿ ಪದವಿ ಹಾಗೂ ರುಟ್ ಗೇರ್ಸ್ ಲಾ ಕಾಲೇಜಿನಲ್ಲಿ ಜ್ಯೂರಿಸ್ ಡಾಕ್ಟರೇಟ್ ಪದವಿ ಪಡೆದಿದ್ದರು.