ಟೆಹ್ರಾನ್, ಜ.08 (Daijiworld News/PY) : ಇರಾಕ್ನಲ್ಲಿರುವ ಅಮೆರಿಕ ಮೈತ್ರಿಕೂಟದ ಪಡೆಗಳ ಮೇಲೆ ಬುಧವಾರ ಇರಾನ್ ನಡೆಸಿದ್ದ 15 ಮಿಸೈಲ್ಸ್ ದಾಳಿಯಲ್ಲಿ 80 ಅಮೆರಿಕನ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಇರಾನ್ ನಡೆಸಿದ ಮಿಸೈಲ್ಸ್ ದಾಳಿಯಲ್ಲಿ ಅಮೆರಿಕದ ಹೆಲಿಕಾಪ್ಟರ್ಗಳು ಮತ್ತು ಮಿಲಿಟರಿ ಯುದ್ಧೋಪಕರಣಗಳು ಹಾನಿಯಾಗಿದೆ ಎಂದು ವರದಿ ತಿಳಿಸಿದೆ.
ನಾವು ದಾಳಿ ನಡೆಸಿ ಮಿಸೈಲ್ಸ್ಗಳಿಗೆ ತಡೆಯೊಡ್ಡಲು ಸಾಧ್ಯವಾಗಿಲ್ಲ, ಈ ದಾಳಿಗೆ ಪ್ರತಿಯಾಗಿ ಅಮೆರಿಕ ದಾಳಿ ನಡೆಸಿದರೆ ಇರಾನ್ ಕೂಡಾ ನೂರಾರು ಪ್ರದೇಶಗಳ ಮೇಲೆ ದಾಳಿ ನಡೆಸುವುವ ಗುರಿ ಹೊಂದಿರುವುದಾಗಿ ವರದಿ ತಿಳಿಸಿದೆ.
ಇತ್ತಿಚೆಗೆ ಅಮೇರಿಕ ವೈಮಾನಿಕ ಪಡೆ ನಡೆಸಿದ ದಾಳಿಯಿಂದಾಗಿ ಇರಾನ್ ಮಿಲಿಟರಿ ಜನರಲ್ ಕಮಾಂಡರ್ ಖಾಸಿಂ ಸೊಲೆಮನಿಯನ್ನು ಹತ್ಯೆ ಮಾಡಲಾಗಿತ್ತು, ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಇರಾನ್ ಮಿಸೈಲ್ ದಾಳಿ ನಡೆಸಿದ್ದು ಇದು ಅಮೇರಿಕಾಕ್ಕೆ ಇರಾನ್ ನೀಡಿದ ಎಚ್ಚರಿಕೆಯಾಗಿದೆ. ಇರಾನ್ ನಡೆಸಿದ ಈ ದಾಳಿಯ ಪ್ರತಿಯಾಗಿ ಅಮೇರಿಕ ದಾಳಿ ನಡೆಸಿದ್ದೇ ಆದರೆ ನಾವು ಇನ್ನಷ್ಟು ಹಿಂಸಾತ್ಮಕ ದಾಳಿ ನಡೆಸಬೇಕಾಗುತ್ತದೆ ಎಂದು ಇರಾನ್ ಎಚ್ಚರಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
ಈ ದಾಳಿಯಿಂದಾಗಿ ಅಮೇರಿಕಕ್ಕೆ ನಮ್ಮ ಸಾಮರ್ಥ್ಯ ಏನೆಂದು ತಿಳಿದಿದೆ. ಅಲ್ಲದೇ ಮಧ್ಯ ಏಷ್ಯಾದಿಂದ ಅಮೇರಿಕ ಪಡೆಗಳನ್ನು ಪುನಃ ಕರೆಸಿಕೊಳ್ಳುವ ಕಾಲ ಈಗ ಬಂದೊದಗಿದೆ ಎಂದು ಇರಾನ್ ಸೇನಾಪಡೆಯ ಮೊಹಮ್ಮದ್ ಬಾಖೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.