ಸಿಡ್ನಿ, ಜ.08 (Daijiworld News/PY) : ಒಂಟೆಗಳು ಹೆಚ್ಚಿನ ಪ್ರಮಾಣದ ನೀರನ್ನು ಕುಡಿಯುವ ಮೂಲಕ ಜನರಿಗೆ ತೊಂದರೆ ಕೊಡುತ್ತಿರುವ 10 ಸಾವಿರಕ್ಕೂ ಅಧಿಕ ಒಂಟೆಗಳನ್ನು ಕೊಲ್ಲಲು ಆಸ್ಟ್ರೇಲಿಯಾ ನಿರ್ಧರಿಸಿದೆ.
ಒಂಟೆಗಳ ಹತ್ಯೆಗಾಗಿ ಆಸ್ಟ್ರೇಲಿಯಾ 5 ದಿನಗಳ ಕಾರ್ಯಾಚರಣೆ ನಡೆಸಲಿದ್ದು, ಹೆಲಿಕಾಪ್ಟರ್ಗಳ ಮೂಲಕ ಒಂಟೆಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗುತ್ತದೆ.
ಸತತವಾಗಿ ಹರಡುತ್ತಿರುವ ಕಾಡ್ಗಿಚ್ಚಿನಿಂದಾಗಿ ಹೆಚ್ಚಿನ ಪ್ರಮಾಣದ ನೀರನ್ನು ಕುಡಿಯುತ್ತಿರುವುದರಿಂದ ಒಂಟೆಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ ಎಂದು ಆಸ್ಟ್ರೇಲಿಯಾದ ಅಧಿಕಾರಿಗಳು ವರದಿಯೊಂದರಲ್ಲಿ ತಿಳಿಸಿದ್ದಾರೆ.
ಕಾಡ್ಗಿಚ್ಚಿನಿಂದಾಗಿ ಈಗಾಗಲೇ 12ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 480 ಮಿಲಿಯನ್ ಪ್ರಾಣಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಅಥವಾ ಸಾವನ್ನಪ್ಪಿದೆ ಎಂದು ಯುನಿರ್ವಸಿಟಿ ಆಫ್ ಸಿಡ್ನಿ ರಿಸರ್ಚರ್ಸ್ ತಿಳಿಸಿದೆ.