ವ್ಯಾಟಿಕನ್ ಸಿಟಿ, ಜ.09 (Daijiworld News/PY) : ಈ ಹಿಂದೆ ಕೋಪಗೊಂಡು ಕ್ಷಮೆಯಾಚಿಸಿ ಸುದ್ದಿಯಾಗಿದ್ದ ಪೋಪ್ ಇದೀಗ ಮಹಿಳೆಯೊಬ್ಬರಿಗೆ ಕಚ್ಚಬೇಡಿ ಎಂದು ವಿನಂತಿಸಿ ಮತ್ತೆ ಸುದ್ದಿಯಾಗಿದ್ದಾರೆ.
ಪೋಪ್ ಅವರ ಆಶೀರ್ವಾದಕ್ಕಾಗಿ ಸಾವಿರಾರು ಜನ ಒಂದು ಸಭಾಂಗಣಕ್ಕೆ ಸೇರಿದ್ದರು ಈ ವೇಳೆ ಪೋಪ್ ಫ್ರಾನ್ಸಿಸ್ ಅವರ ಆಗಮನಕ್ಕಾಗಿ ಉತ್ಸಾಹದಿಂದ ಕಾದು ಕುಳಿತ ಸನ್ಯಾಸಿನಿಯೊಬ್ಬರು ತನಗೆ ಪವಿತ್ರ ಚುಂಬನ ನೀಡುತ್ತೀರಾ ಎಂದು ಕೇಳಿಕೊಂಡಿದ್ಧಾರೆ.
ಸನ್ಯಾಸಿನಿಯ ಕೋರಿಗೆ ಪ್ರತಿಕ್ರಿಯಿಸಿದ ಪೋಪ್ ನಾನು ನಿಮಗೆ ಪವಿತ್ರ ಚುಂಬನ ನೀಡುತ್ತೇನೆ ಆದರೆ, ನೀವು ಶಾಂತರಾಗಿರಿ, ಕಚ್ಚಬೇಡಿ ಎಂದು ಕೇಳಿಕೊಂಡಿದ್ಧಾರೆ.
ಪೋಪ್ನ ಮಾತಿಗೆ ಒಪ್ಪಿಗೆ ನೀಡಿದ ಸನ್ಯಾಸಿನಿಯ ಬಲ ಕೆನ್ನೆಗೆ ಚುಂಬನ ನೀಡಿದ ವೇಳೆ ಸನ್ಯಾಸಿನಿ ಧನ್ಯವಾದಗಳು ಪೋಪ್ ಎಂದು ಜಿಗಿಯುತ್ತಾ ಸಂತೋಷ ವ್ಯಕ್ತಪಡಿಸಿದ್ದಾರೆ.
ಪೋಪ್ನ ಆಗಮನಕ್ಕಾಗಿಯೇ ಕಾಯುತ್ತಿರುವ ಜನರು ತಮ್ಮ ಕೈ ಕುಲುಕಿ ಹಾರೈಸಲಿ ಎಂದು ಎಲ್ಲರೂ ಉತ್ಸಾಹದಿಂದ ಎದುರುನೋಡುತ್ತಿರುತ್ತಾರೆ.
ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ನೆರೆದಿದ್ದ ಭಕ್ತರ ಗುಂಪಿಗೆ ಶುಭಾಷಯ ಕೋರುತ್ತಾ ಹೋಗುತ್ತಿದ್ದ ಸಂದರ್ಭದಲ್ಲಿ ತನ್ನ ಕೈ ಹಿಡಿದು ಎಳೆದ ಮಹಿಳೆಯ ಕೈಗೆ ಹೊಡೆದ ಹಿನ್ನೆಲೆ, "ನಾನು ಕೆಲವೊಮ್ಮೆ ತಾಳ್ಮೆಯನ್ನು ಕಳೆದುಕೊಳ್ಳುತ್ತೇನೆ. ನಾನು ನಡೆದುಕೊಂಡ ರೀತಿಗೆ ಕ್ಷಮೆ ಕೇಳುತ್ತೇನೆ" ಎಂದು ತಿಳಿಸಿದ್ದಾರೆ.