ನ್ಯೂಯಾರ್ಕ್, ಜ.10 (Daijiworld News/PY) : ಪಾಕಿಸ್ತಾನದ ವಿಶ್ವಸಂಸ್ಥೆಯ ಶಾಶ್ವತ ರಾಯಭಾರಿ ಮುನಿರ್ ಅಕ್ರಮ್, ಜಮ್ಮು-ಕಾಶ್ಮೀರ ವಿಚಾರವನ್ನು ಪ್ರಸ್ತಾವಿಸಿ, ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಸಹಜವಾಗಿದೆ ಎಂದು ಸುಳ್ಳು ಹೇಳುತ್ತಿದೆ ಎಂದು ಹೇಳಿಕೆ ನೀಡಿದ್ದಕ್ಕೆ, "ನಿಮ್ಮ ತಪ್ಪುಗಳನ್ನು ಸರಿಪಡಿಸಲು ಇಲ್ಲಿ ಯಾರೂ ಇಲ್ಲ, ನಿಮ್ಮ ತಪ್ಪುಗಳನ್ನು ಮುಚ್ಚಿಹಾಕಲು ಭಾರತದ ಮೇಲೆ ಸುಮ್ಮನೆ ಆಪಾದನೆ ಹೊರಿಸಬೇಡಿ" ಎಂದು ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಹೇಳಿದರು.
"ಪಾಕಿಸ್ತಾನ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳುವ ಸಲುವಾಗಿ ಭಾರತದ ಮೇಲೆ ಸುಳ್ಳು ಆಪಾದನೆ ಹಾಕುವುದನ್ನು ನಿಲ್ಲಿಸಬೇಕು, ಮಾಟ, ಮಂತ್ರದಂತಹ ಬ್ಲಾಕ್ ಮ್ಯಾಜಿಕ್ ಕಾರ್ಯಗಳಿಗೆ ಪಾಕಿಸ್ತಾನ ಒಂದು ಉತ್ತಮ ಉದಾಹರಣೆ, ಭಯೋತ್ಪಾಧನೆಯಿಂದ ಪಾಕಿಸ್ತಾನವನ್ನು ತಡೆಯುವಲ್ಲಿ ವಿಶ್ವಸಂಸ್ಥೆಯ ಉನ್ನತ ಅಂಗ ಸಹ ಅಸಮರ್ಥವಾಗಿದೆ" ಎಂದು ಹೇಳಿದರು.
"ಜಾಗತಿಕ ಭಯೋತ್ಪಾಧನೆಯ ಜಾಲವ್ಯಾಪ್ತಿ, ನೂತನ ತಂತ್ರಜ್ಞಾನಗಳ ಸಶಸ್ತ್ರೀಕರಣ, ಹಾಗೂ ದೇಶೀಯ ಶಸ್ತ್ರಾಸ್ತ್ರಗಳಿಂದ ಭಯೋತ್ಪಾದನೆಯನ್ನು ನಿಗ್ರಹಿಸುವ ಅಸಮರ್ಥತೆಯನ್ನು ಭದ್ರತಾ ಮಂಡಳಿ ತೋರಿಸುತ್ತಿದೆ, ಇತ್ತೀಚಿನ ದಿನಗಳಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಗುರುತು, ನ್ಯಾಯಸಮತೆ,ಪ್ರಸ್ತುತತೆ ಮತ್ತು ಕಾರ್ಯಕ್ಷಮತೆಯ ಸಮಸ್ಯೆಯನ್ನು ಎದುರಿಸುತ್ತಿದೆ" ಎಂದರು.