ಟೆಹರಾನ್, ಜ.12 (Daijiworld News/PY) : ನಾಗರಿಕ ವಿಮಾನವನ್ನು ಹೊಡೆದುರುಳಿಸುವ ಮೂಲಕ 176 ಅಮಾಯಕರ ಸಾವಿಗೆ ಕಾರಣವಾದವರ ವಿರುದ್ದ ಕೋಪಗೊಂಡ ಇರಾನ್ ಯುವಜನರು ಸರ್ವೋಚ್ಚ ನಾಯಕ ಅಯಾತ್ಉಲ್ಲಾ ಅಲಿ ಖೋಮಾನಿ ಅಧಿಕಾರದಿಂದ ಕೆಳಗಿಳಿಯುವಂತೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಟೆಹರಾನ್ನ ಅಮೀರ್ ಕಬೀರ್ ವಿಶ್ವವಿದ್ಯಾನಿಲಯದ ಎದುರು ಕಮಾಂಡರ್ ಇನ್ ಚೀಫ್ ರಿಸೈನ್ ರಿಸೈನ್ ಎಂದು ಸಾವಿರಾರು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇರಾನ್ನಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದರೂ ವಿಮಾನಕ್ಕೆ ಟೇಕಾಫ್ಗೆ ಅವಕಾಶ ನೀಡಿದ್ದೇಕೆ ಎಂದು ಹಲವು ಜನರು ತಮ್ಮ ಸರ್ಕಾರವನ್ನು ಟೀಕಿಸಿದ್ದಾರೆ.
ಪ್ರತಿಭಟನೆ ವೇಳೆ ಹಿಂಸೆಗೆ ಪ್ರಚೋದನೆ ನೀಡುವ ಘೋಷಣೆಗಳನ್ನು ಹೇಳುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ಚದುರಿಸಿದ್ದಾರೆ.
ವಿಮಾನ ದುರಂತದಿಂದ ಆಕ್ರೋಶಗೊಂಡ ಜನರು ಅಮೆರಿಕ್ಕಕೆ ಸಾವು ಬರಲಿ ಎಂದು ಘೋಷಣೆ ಕೂಗುತ್ತಿದ್ದ ವಿದ್ಯಾರ್ಥಿಗಳು ಇದೀಗ ಸುಳ್ಳು ಹೇಳುವವರು ಸತ್ತು ಹೋಗಲಿ ಎಂಬ ಘೋಷಣೆಗಳನ್ನು ಕೂಗುತ್ತಾ ತಮ್ಮ ದೇಶದ ಅಧಿಕಾರಿಗಳ ವಿರುದ್ದ ಪ್ರತಿಭಟನೆ ಪ್ರಾರಂಭಿಸಿದ್ದಾರೆ.
ಮೊದಲು ತಾಂತ್ರಿಕ ತೊಂದರೆಗಳಿಂದ ವಿಮಾನ ಪತನವಾಗಿದೆ ಎಂದು ವಾದ ಮಾಡುತ್ತಿದ್ದ ಇರಾನ್ ನಂತರ, ಉಕ್ರೇನ್ ವಿಮಾನ ಹೊಡೆದುರುಳಿಸಿದ್ದು ನಾವೇ, ನಮ್ಮಿಂದ ತಪ್ಪಾಗಿದೆ ಎಂದಿ ಇರಾನ್ ತಪ್ಪು ಒಪ್ಪಿಕೊಂಡಿತ್ತು.