ಶಾಂಘೈ , ಜ.14 (Daijiworld News/PY) : ಬಸ್ಸೊಂದು ಚಲಿಸುತ್ತಿದ್ದ ಸಂದರ್ಭ ರಸ್ತೆ ಕುಸಿದು ಹೋಗಿ ಬಸ್ನಲ್ಲಿದ್ದ ಕನಿಷ್ಟ 10 ಮಂದಿ ಪ್ರಯಾಣಿಕರು ನಾಪತ್ತೆಯಾದ ಘಟನೆ ಚೀನಾದ ಶಾಂಘೈ ಎಂಬಲ್ಲಿ ಸೋಮವಾರ ನಡೆದಿದೆ ಎಂದು ವರದಿಯೊಂದು ತಿಳಿಸಿದೆ.
ಚೀನಾದ ಶಾಂಘೈನ ಗ್ರೇಟ್ವಾಲ್ ಆಸ್ಪತ್ರೆಯ ಮುಂಭಾಗದಲ್ಲಿ ರಸ್ತೆಯ ಒಂದು ಭಾಗ ಕುಸಿದು ಕಂದಕ ಉಂಟಾಗಿದ್ದು, ಅದೇ ಸಂದರ್ಭ ಅಲ್ಲಿ ಸಂಚರಿಸುತ್ತಿದ್ದ ಬಸ್ಸೊಂದು ಕಂದಕದೊಳಗೆ ಬಿದ್ದು ಸ್ಪೋಟಗೊಂಡಿದೆ ಎಂದು ವರದಿ ತಿಳಿಸಿದೆ.
ಕಂದಕದೊಳಗೆ ಬಸ್ ಬಿದ್ದ ಪರಿಣಾಮ ಕನಿಷ್ಟ 10 ಮಂದಿ ಪ್ರಯಾಣಿಕರು ನಾಪತ್ತೆಯಾಗಿದ್ದು, 15 ಜನ ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ.