ಉಗಾಂಡ, ಜ.16 (Daijiworld News/PY) : ಪುರುಷನನ್ನು ಮದುವೆಯಾದ ಕಾರಣಕ್ಕಾಗಿ ಇಮಾಮ್ನನ್ನು ಕ್ಲೆರಿಕ್ ಸ್ಥಾನದಿಂದ ಅಮಾನತು ಮಾಡಿದ ಘಟನೆ ಉಗಾಂಡಾದಲ್ಲಿ ನಡೆದಿದೆ.
ಶೇಖ್ ಮೊಹಮ್ಮದ್ ಮುತುಂಬಾ (27) ಅವರ ಪತ್ನಿ ನೆರೆಹೊರೆಯವರ ಮನೆಯಿಂದ ಟಿವಿ ಕದಿಯುತ್ತಿರುವ ವೇಳೆ ಸಿಕ್ಕಿ ಬಿದ್ದಿದ್ದು ವಿಚಾರಣೆ ನಡೆಸುವ ಸಂದರ್ಭ ತಾನು ಕಳ್ಳತನ ಮಾಡಲು ಮಹಿಳೆಯಂತೆ ನಟಿಸುತ್ತಿರುವ ವಿಚಾರವನ್ನು ಹೇಳಿದ್ದಾನೆ.
ಮದುವೆಯ ನಂತರ ಎರಡು ವಾರಗಳ ಮೊದಲು ಆಕೆ ಮುಟ್ಟಾಗಿದ್ದೇನೆ ಎಂದು ಆಕೆ ಹೇಳಿರುವುದಾಗಿ ಮುತುಂಬಾ ತಿಳಿಸಿದ್ದಾನೆ.
ಡಿಸೆಂಬರ್ನಲ್ಲಿ ನಡೆದ ಸಾಂಪ್ರದಾಯಿಕ ಇಸ್ಲಾಮಿಕ್ ಸಮಾರಂಭವೊಂದರಲ್ಲಿ ಸ್ವಾಬುಲ್ಲಾ ನಬುಕೀರ ಎಂಬ ಮಹಿಳೆಯನ್ನು ಮದುವೆಯಾಗುವುದಾಗಿ ಮುತುಂಬಾ ಹೇಳಿದ್ದರು ಎನ್ನಲಾಗಿದೆ.
ಪಕ್ಕದ ಮನೆಯಿಂದ ಬಟ್ಟೆಗಳನ್ನು ಹಾಗೂ ಟೆಲಿವಿಷನ್ ಸೆಟ್ಗಳನ್ನು ಕಳ್ಳತನ ಮಾಡಿದ್ದಕ್ಕಾಗಿ ಆಕೆಯನ್ನು ಬಂಧಿಸಿದ್ದು ಬಳಿಕ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ವಿಚಾರಣೆ ನಡೆಸುವ ವೇಳೆ ಆಕೆ ಮಹಿಳೆಯಲ್ಲ, ಪುರುಷ ಎಂಬ ಸತ್ಯ ಹೊರಬಿದ್ದಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಮೊಹಮ್ಮದ್ ಮುತುಂಬಾ, ನಾನು ಮದುವೆಯಾಗಲು ಹುಡುಗಿಗಾಗಿ ಹುಡುಕುತ್ತಿದ್ದೆ. ಆ ಸಂದರ್ಭ ಹಿಜಾಬ್ ಧರಿಸಿದ್ದ ಯುವತಿಯನ್ನು ಭೇಟಿಯಾದೆ. ನಾನು ಆಕೆಯ ಕುಟುಂಬಸ್ಥರಿಗೆ ವಧುದಕ್ಷಿಣೆ ನೀಡಿ, ವಿವಾಹವಾಗುವವರೆಗೂ ಲೈಂಗಿಕ ಸಂಪರ್ಕ ಬೆಳೆಸೋದು ಬೇಡ ಎಂದು ಹೇಳಿದ್ದಳು ಎಂದು ತಿಳಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿ ತನ್ನ ನಿಜವಾದ ಹೆಸರು ರಿಚರ್ಡ್ ತುಮುಶಾಬೆ ಎಂದು ಹೇಳಿದ್ದು, ಪಾದ್ರಿಯ ಹಣವನ್ನು ಕದಿಯುವ ಉದ್ದೇಶದಿಂದ ತಾನು ಮುತುಂಬಾ ಅವರನ್ನು ಮದುವೆಯಾಗಿದ್ದಾಗಿ ಒಪ್ಪಿಕೊಂಡಿದ್ದಾನೆ.
ಮುತುಂಬಾ ಮಸೀದಿಯಲ್ಲಿ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ್ದರು ಹಾಗೂ ಅವರು ಮಸೀದಿಯ ಮೂರು ಇಮಾಮ್ಗಳಲ್ಲಿ ಒಬ್ಬರು, ಮಸೀದಿಯ ನಂಬಿಕೆ ಮತ್ತು ಸಮಗ್ರತೆಯನ್ನು ಕಾಪಾಡಲು ಅಮಾನತು ಮಾಡುವುದು ಅಗತ್ಯ ಎಂದು ಮಸೀದಿಯ ಮುಖ್ಯಸ್ಥ ಇಮಾಮ್ ಶೇಖ್ ಇಸಾ ಬುಸುಲ್ವಾ ಹೇಳಿದ್ದಾರೆ.