ಲಂಡನ್, ಜ 17 (Daijiworld News/ MB) : ಭಾರತೀಯ ಉದ್ಯಮಿ ವಿಜಯ್ ಮಲ್ಯ ಅವರ ಫ್ರೆಂಚ್ ದ್ವೀಪದಲ್ಲಿರುವ 17 ಬೆಡ್ರೂಂ, ಚಿತ್ರಮಂದಿರ, ಖಾಸಗಿ ಹೆಲಿಪ್ಯಾಡ್ ಹಾಗೂ ನೈಟ್ ಕ್ಲಬ್ ಹೊಂದಿರುವ ಫ್ರೆಂಚ್ ದ್ವೀಪ ಭವನ ದುರಸ್ತಿ ಕಾಣದೆ ಪಾಳು ಬಿದ್ದಿದೆ ಎಂದು ಮಲ್ಯ ಸಾಲ ಪಾವತಿ ಮಾಡಲಾಗದ ಹಿನ್ನಲೆಯಲ್ಲಿ ಮೊಕದ್ದಮೆ ಹೂಡಿರುವ ಬ್ಯಾಂಕ್ ಒಂದು ಆರೋಪ ಮಾಡಿದೆ.
ಮಲ್ಯ ತನಗೆ ನೀಡಿದ ಸಾಲದ ಮೊತ್ತವನ್ನು ವಿಸ್ತರಣೆ ಮಾಡುವಂತೆ ಕೋರಿದ ಹಿನ್ನಲೆಯಲ್ಲಿ ಬ್ಯಾಂಕ್ ಆಸ್ತಿ ಸಲಹಾ ಸಂಸ್ಥೆಯಾಗಿರುವ ನೈಟ್ ಫ್ರಾಂಕ್ಗೆ ಪರಿಶೀಲನೆ ನಡೆಸುವಂತೆ ಹೇಳಿದ್ದು ಪರಿಶೀಲನೆ ನಡೆಸಿದಾಗ ಈ ಕಟ್ಟಡದ ಮೌಲ್ಯವು 10 ಮಿಲಿಯನ್ ಯೂರೋಗಳಿಂದ 30 ಮಿಲಿಯನ್ ಯುರೋಗಳಿಗೆ ಇಳಿದಿದೆ ಎಂದು ಕಂಡುಕೊಂಡಿದ್ದಾರೆ. ಹಾಗೆಯೇ ಈ ಕಟ್ಟಡ ನಿರ್ಮಾಣ ಅಪೂರ್ಣವಾಗಿದೆ ಎಂದು ತಿಳಿದು ಬಂದಿದೆ.
ಲಂಡನ್ ನ್ಯಾಯಾಲಯದಲ್ಲಿ ಬ್ಯಾಂಕಿನ ವಕೀಲ ಗಿಡಿಯಾನ್ ಶಿರಾಜಿ ಕಟ್ಟಡ ದುರಸ್ತಿಯಲ್ಲಿದೆ ಎಂದು ಹೇಳಿದ್ದು ದಾಖಲೆಗಳನ್ನು ಸಲ್ಲಿಸಿದ್ದಾರೆ.
ಮಲ್ಯ ಮತ್ತು ಕತಾರ್ ನ್ಯಾಷನಲ್ ಬ್ಯಾಂಕ್ ಈ ಕುರಿತು ಪ್ರತಿಕ್ರಿಯೆ ನೀಡಲು ತಿಳಿಸಿರುವುದಕ್ಕೆ ತಕ್ಷಣ ಸ್ಪಂದನೆ ನೀಡಿಲ್ಲ. ಮಲ್ಯ ಕೊರ್ಟ್ಗೆ ಗೈರು ಹಾಜರಾಗಿದ್ದರು. ಪ್ರಸ್ತುತ ಈ ಐಸ್ಲ್ಯಾಂಡ್ ಮನೆಯನ್ನು ಮಾರಾಟ ಮಾಡುವ ಪಟ್ಟಿಯಲ್ಲಿ ನಮೂದಿಸಲಾಗಿದೆ.