ಲಂಡನ್, ಜ.19 (Daijiworld News/PY) : ಬ್ರಿಟನ್ ರಾಜಮನೆತನದ ಯುವರಾಜ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಅಧಿಕೃತವಾಗಿ ಅರಮನೆಯ ಜವಾಬ್ದಾರಿಗಳನ್ನು ತೊರೆದು ಸಾಮಾನ್ಯ ಜೀವನ ನಡೆಸಲು ನಿರ್ಧರಿಸಿದ್ದಾರೆ.
ರಾಜ ಮನೆತನದ ಯುವರಾಜ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಅವರು ಇನ್ನು ಅವರ ಕೆಲಸ ಕಾರ್ಯಗಳಿಗೆ ಸಾರ್ವಜನಿಕ ಹಣವನ್ನು ಉಪಯೋಗಿಸುವುದಿಲ್ಲ ಹಾಗೂ 2020ರ ವಸಂತ ಋತುವಿನಿಂದಲೇ ಅರಮನೆಯ ನೂತನ ವ್ಯವಸ್ಥೆಗಳು ಅನುಷ್ಠಾನಗೊಳ್ಳಲಿವೆ ಎಂದು ಬಕಿಂಗ್ ಹ್ಯಾಮ್ ಅರಮನೆ ಅಧಿಕೃತ ಘೋಷಣೆ ಹೊರಡಿಸಿದೆ ಎನ್ನಲಾಗಿದೆ.
ಹ್ಯಾರಿ ಮತ್ತು ಮೇಘನ್ ದಂಪತಿ ಕಳೆದ10 ದಿನಗಳ ಹಿಂದೆ ರಾಜ ಮನೆತನದ ಆಡಂಭರಗಳನ್ನು ತೊರೆಯುವುದಾಗಿ ತಿಳಿಸಿದ್ದರು. ನಮಗೆ ರಾಜ ಹಾಗೂ ರಾಣಿ ಎಂಬ ಪದನಾಮಗಳು ಬೇಡ ಎಂದಿದ್ದರು. ಪ್ರಿನ್ಸ್ ಚಾರ್ಲ್ಸ್ ಅವರೊಂದಿಗೆ ವಿಚ್ಚೇದನ ಪಡೆದಿದ್ದ ಹ್ಯಾರಿ ಅವರ ತಾಯಿ ಡಯನಾ ಅವರೂ ತಮ್ಮ ಹೆಸರಿನೊಂದಿಗಿದ್ದ ಘನತೆವೆತ್ತ ಪದನಾಮವನ್ನು ತೆಗೆದಿದ್ದರು. ಆದರೆ ಹ್ಯಾರಿ ಅವರು ರಾಜ ಮನೆತನದ ವೈಭೋಗಗಳನ್ನು ತೊರೆದಿದ್ದರೂ ಅಹ ಅವರು ಬ್ರಿಟಿಷ್ ಸಿಂಹಾಸನದ ದೊರೆಯಾಗಿರಲಿದ್ದಾರೆ ಎನ್ನಲಾಗಿದೆ.
ಅರಮನೆ ಜೊತೆಗಿನ ಒಪ್ಪಂದದಲ್ಲಿ ಹ್ಯಾರಿ ದಂಪತಿ ಅವರು ವಿಂಡ್ಸರ್ ಕಾಸ್ಟಲ್ನ ತಮ್ಮ ಮನೆಯ ಜೀಣೋದ್ದಾರಕ್ಕಾಗಿ ಮಾಡಿರುವ ಸಾರ್ವಜನಿಕರ ತೆರಿಗೆ ಮೊತ್ತ 2.4 ಮಿಲಿಯನ್ ಪೌಂಡ್ಸ್ಗಳನ್ನು ಹಿಂದಿರುಗಿಸಬೇಕೆಂದು ವರದಿ ತಿಳಿಸಿದೆ.