ದುಬೈ, ಜ.19 (Daijiworld News/PY) : ಹೌತಿ ಬಂಡುಕೋರರು ಯೆಮೆನ್ನ ಮಸೀದಿಯೊಂದರ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದ್ದು, ದಾಳಿಯಲ್ಲಿ 80ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದಾರೆ.
ಇರಾನ್ ಬೆಂಬಲಿತ ಹೌತಿ ಬಂಡುಕೋರರು ಮತ್ತು ಯೆಮೆನ್ ಸರ್ಕಾರದ ನಡುವಿನ ಯುದ್ಧಕ್ಕೆ ಅಲ್ಪವಿರಾಮ ಬಿದ್ದ ಒಂದು ತಿಂಗಳಲ್ಲೇ ಮರೀಬ್ನ ಕೇಂದ್ರ ಪ್ರಾಂತ್ಯದ ಸೇನಾ ಶಿಬಿರದಲ್ಲಿರುವ ಮಸೀದಿಯ ಮೇಲೆ ಕ್ಷಿಪಣಿ ಮತ್ತು ಡ್ರೋನ್ ಮೂಲಕ ದಾಳಿ ನಡೆಸಲಾಗಿದೆ.
ಸಂಜೆಯ ವೇಳೆ ಮಸೀದಿಯಲ್ಲಿ ಪ್ರಾರ್ಥನೆ ನಜಡೆಯುತ್ತಿದ್ದ ಸಂದರ್ಭ ಈ ದಾಳಿ ನಡೆದಿದ್ದು, 80ಕ್ಕೂ ಹೆಚ್ಚು ಯೆಮೆನ್ ಯೋಧರು ಸಾವನ್ನಪ್ಪಿದ್ದು, 148 ಮಂದಿ ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.