ಅಬುಜಾ, ಜ 20 (Daijiworld News/MSP): ಆಫ್ರಿಕಾದ ಪಶ್ಚಿಮ ಕರಾವಳಿಯಲ್ಲಿ ವಾಣಿಜ್ಯ ಹಡಗಿನಲ್ಲಿದ್ದ 20 ಮಂದಿ ಭಾರತೀಯರನ್ನು ಡಿ.15 ರಂದು ಕಡಲ್ಗಳ್ಳರು ಅಪಹರಿಸಿದ್ದು, ಈ ಪೈಕಿ 19 ಭಾರತೀಯರು ಭಾನುವಾರ ಸುರಕ್ಷಿತವಾಗಿ ಬಿಡುಗಡೆಗೊಂಡಿದ್ದಾರೆ.
ಆಫ್ರಿಕಾದ ಪಶ್ಚಿಮ ಕರಾವಳಿ ತೀರದಲ್ಲಿ ಪ್ರಯಾಣಿಸುತ್ತಿದ್ದ ಚೆನ್ನೈ ಮೂಲದ ಎಂ.ಟಿ. ಡ್ಯೂಕ್ ಎಂಬ ಕಚ್ಚಾ ತೈಲ ಸಾಗಣೆ ಹಡಗನ್ನು ಹಾಗೂ ಅದರಲ್ಲಿದ್ದ 20 ಭಾರತೀಯರನ್ನು ಅಪಹರಿಸಲಾಗಿತ್ತು.
ಭಾರತ ಸರಕಾರದ ಸಂಧಾನದಿಂದ, ಹಾಗೂ ಅಬುಜಾದಲ್ಲಿನ ಭಾರತೀಯ ಅಧಿಕಾರಿಗಳು, ನೈಜೀರಿಯಾದ ಅಧಿಕಾರಿಗಳೊಂದಿಗೆ ಮತ್ತು ನೆರೆಯ ರಾಷ್ಟ್ರಗಳ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಭಾನುವಾರ 19 ಮಂದಿ ಬಿಡುಗಡೆಯಾಗಿದ್ದಾರೆ. ಹಡಗಿನಲ್ಲಿದ್ದ ಸಿಬ್ಬಂದಿಗಳ ಪೈಕಿ ಓರ್ವ ಭಾರತೀಯ ಕಾಯಿಲೆಯಿಂದ ಮೃತಪಟ್ಟಿದ್ದಾನೆ.