ವಾಷಿಂಗ್ಟನ್, ಜ 24(Daijiworld News/MSP): ಅಮೇರಿಕಾದ ಡೊನಾಲ್ಡ್ ಟ್ರಂಪ್ ಸರ್ಕಾರ ಗರ್ಭಿಣಿಯರಿಗೆ ವೀಸಾ ನೀಡದೇ ಇರಲು ನಿರ್ಧರಿಸಿದ್ದು, ತನ್ನ ಹೊಸ ವೀಸಾ ನಿಯಮಗಳನ್ನು ಪ್ರಕಟಿಸಿದೆ ವಿದೇಶಿ ಗರ್ಭಿಣಿಯರು ಅಮೇರಿಕಾದಲ್ಲಿ ಹೆರಿಗೆ ಆಗುವುದರಿಂದ ಅವರ ಮಕ್ಕಳು ಯುಎಸ್ ಪೌರತ್ವವನ್ನು ಹೊಂದುತ್ತಾರೆ ಎಂಬ ಉದ್ದೇಶದಿಂದ ಇನ್ನು ಮುಂದೆ ಮುಂದೆ ಗರ್ಭಿಣಿಯರಿಗೆ ವೀಸಾ ನೀಡುವುದಿಲ್ಲ ಎಂದು ಅಮೆರಿಕ ಹೇಳಿದ್ದು ಇದು ಶುಕ್ರವಾರದಿಂದಲೇ ಜಾರಿಗೆ ಬರಲಿದೆ.
ಗರ್ಭಿಣಿಯರು ಅಮೇರಿಕಾಕ್ಕೆ ಪ್ರವಾಸ ಮಾಡಲೆಂದು ಅಮೆರಿಕಕ್ಕೆ ಬರುತ್ತಿಲ್ಲ. ಬದಲಾಗಿ ಪೌರತ್ವ ಪಡೆಯುವ ಸಲುವಾಗಿ ಮಗುವಿಗೆ ಜನ್ಮ ನೀಡಲೆಂದೇ ‘ಜನನ ಪ್ರವಾಸ’ವನ್ನು ಕೈಗೊಳ್ಳುತ್ತಾರೆ. ಈ ಹಿನ್ನಲೆಯಲ್ಲಿ ವೀಸಾ ದುರುಪಯೋಗ ಆಗುವುದನ್ನು ತಡೆಗಟ್ಟಲು ಗರ್ಭಿಣಿಯರಿಗೆ ವೀಸಾ ನೀಡಲಾಗದು ಎಂಬ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಸರ್ಕಾರ ಸಮರ್ಥಿಸಿಕೊಂಡಿದೆ.
ಅಮೇರಿಕಾದ ಸಂವಿಧಾನದ 14 ನೇ ತಿದ್ದುಪಡಿಯ ಪ್ರಕಾರ ,ಅಮೆರಿಕದಲ್ಲಿ ಜನಿಸಿದ ಪ್ರತಿಯೊಂದು ಮಗುವಿಗೂ ಅಮೆರಿಕದ ಪೌರತ್ವ ಸಿಗುತ್ತದೆ. ಹೀಗಾಗಿ ಗರ್ಭಿಣಿಯರು ಮಕ್ಕಳಿಗೆ ಪೌರತ್ವ ಸಿಗಲೆಂದು ‘ಬರ್ತ್ ಟೂರಿಸಂ’ ಕೈಗೊಳ್ಳುತ್ತಾರೆ ಎಂದು ಆಪಾಧಿಸಿದ್ದಾರೆ. ವೈದ್ಯಕೀಯ ಅಗತ್ಯತೆ ಇರುವವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಯುಎಸ್ಗೆ ಬರುವ ಇತರ ವಿದೇಶಿಯರಂತೆ ಪರಿಗಣಿಸಲಾಗುತ್ತದೆ ಮತ್ತು ಅವರ ಸಾರಿಗೆ ಹಾಗೂ ದೈನಂದಿನ ಖರ್ಚು ವೆಚ್ಚಗಳು ಸೇರಿದಂತೆ ಅದನ್ನು ಪಾವತಿಸಲು ತಮ್ಮ ಬಳಿ ಹಣವಿದೆ ಎಂದು ಸಾಬೀತುಪಡಿಸಬೇಕು ಎಂದಿದೆ
ವಲಸಿಗರದ್ದೇ ದೊಡ್ಡ ಸಮಸ್ಯೆಯಾಗಿ ಅಮೇರಿಕಾಕ್ಕೆ ಕಾಡುತ್ತಿರುವುದರಿಂದ ಅಕ್ರಮವಾಗಿ ನುಸುಳಿರುವ ವಲಸಿಗರನ್ನು ಅಮೆರಿಕದಿಂದ ಓಡಿಸಿ ಅಮೆರಿಕದ ಪೌರತ್ವದ ಸಮಗ್ರತೆಯನ್ನು ರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ರಂಪ್ ಸರ್ಕಾರ ಹೇಳಿಕೊಂಡಿದೆ.