ನ್ಯೂಯಾರ್ಕ್, ಜ.31 (Daijiworld News/PY): ಭಾರತೀಯ ಮೂಲದ ಅರವಿಂದ್ ಕೃಷ್ಣ ಅವರು ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಐಬಿಎಂಗೆ ನೂತನ ಸಿಇಓ ಆಗಿ ಆಯ್ಕೆಯಾಗಿದ್ದಾರೆ.
57 ವರ್ಷ ವಯಸ್ಸಿನ ಅರವಿಂದ ಕೃಷ್ಣ ಅವರು ಎಪ್ರಿಲ್ 6ರಿಂದ ಐಬಿಎಂ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಸದ್ಯ ಅರವಿಂದ ಕೃಷ್ಣ ಅವರು ಸಂಸ್ಥೆಯ ಕ್ಲೌಡ್ ಹಾಗೂ ಕಾಗ್ನೆಟಿವ್ ಯುನಿಟ್ನ ಮುಖ್ಯಸ್ಥರಾಗಿದ್ದಾರೆ.
ಈ ವರ್ಷಾಂತ್ಯಕ್ಕೆ ನಿವೃತ್ತಿಯಾಗಲಿರುವ ವರ್ಜೀನಿಯಾ ರೊಮೆಟಿ ಅವರು ಐಬಿಎಂನಲ್ಲಿ ಸುಮಾರು 40 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ವರ್ಜೀನಿಯಾ ರೊಮೆಟಿ ಅವರು ಈ ವರ್ಷಾಂತ್ಯಕ್ಕೆ ನಿವೃತ್ತಿಯಾಗಲಿದ್ದು, ಈ ವರ್ಷದ ಅಂತ್ಯದವರೆಗೆ ರೊಮೆಟಿ ಅವರು ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಕೆಲ ವರ್ಷಗಳಿಂದ ಐಬಿಎಂ ಸಿಇಓ ಆಗಿದ್ದ ವರ್ಜೀನಿಯಾ ರೊಮೆಟಿ ಅವರ ಜಾಗವನ್ನು ಅರವಿಂದ ಕೃಷ್ಣ ಅವರು ತುಂಬಲಿದ್ದಾರೆ.
ನೂತನ ಸಿಇಓ ಆಗಲಿರುವ ಅರವಿಂದ್ ಕೃಷ್ಣ ಅವರು ಕಾನ್ಪುರದ ಐಐಟಿಯಲ್ಲಿ ಶಿಕ್ಷಣ ಹಾಗೂ ಇಲಿಯಾನ್ಸ್ ವಿಶ್ವವಿದ್ಯಾನಿಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ನಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ.