ಅಮೆರಿಕಾ, ಫೆ.02 (Daijiworld News/PY) : ಅಂತ್ಯಕ್ರಿಯೆ ನಡೆಯುತ್ತಿದ್ದ ಸಂದರ್ಭ ಅಪರಿಚಿತ ವ್ಯಕ್ತಿಯೋರ್ವ ಗುಂಡಿನ ದಾಳಿ ನಡೆಸಿದ ಪರಿಣಾಮ ಬಾಲಕ ಸೇರಿದಂತೆ 2 ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರ ಗಾಯಗೊಂಡ ಘಟನೆ ಪ್ಲೊರಿಡಾದ ವಿಕ್ಟರಿ ಸಿಟಿ ಚರ್ಚ್ನಲ್ಲಿ ನಡೆದಿದೆ.
ಪ್ಲೊರಿಡಾದ ವಿಕ್ಟರಿ ಸಿಟಿ ಚರ್ಚ್ನಲ್ಲಿ ಸುಮಾರು 2:30ರ ವೇಳೆಗೆ ಅಪರಿಚಿತನಿಂದ ಈ ಗುಂಡಿನ ದಾಳಿ ನಡೆದಿದ್ದು 15 ವರ್ಷದ ಬಾಲಕ ಸೇರಿದಂತೆ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ಮಹಿಳೆ ಹಾಗೂ ಮತ್ತೋರ್ವ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದುರಂತದಲ್ಲಿ ಮೃತಪಟ್ಟವರ ಹಾಗೂ ಗಾಯಗೊಂಡವರ ಹೆಸರುಗಳು ತಿಳಿದುಬಂದಿಲ್ಲ ಎಂದು ರೈವಿರಿಯಾ ಬೀಚ್ ಪೊಲೀಸರು ತಿಳಿಸಿದ್ದಾರೆ.
ಅಪರಿಚಿತ 13 ಸುತ್ತು ಗುಂಡು ಹಾರಿಸಿದ್ದು, ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಅಂತ್ಯಕ್ರಿಯೆಯ ನಂತರ ಚರ್ಚ್ನಲ್ಲಿ ಪ್ರಾರ್ಥನೆ ನಡೆಸಲಾಗುತ್ತಿದ್ದು, ಈ ಸಂದರ್ಭ ಅಪರಿಚಿತ ಗುಂಡು ಹಾರಿಸಿದ ಪರಿಣಾಮ 2 ಮೃತಪಟ್ಟಿದ್ದಾರೆ. ಇದಕ್ಕಾಗಿ ಶೋಕ ವ್ಯಕ್ತಪಡಿಸುತ್ತಿದ್ದೇವೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿ ಚರ್ಚ್ನ ಸದಸ್ಯನಲ್ಲ ಎಂದು ಪಾದ್ರಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.