ಥೈಲ್ಯಾಂಡ್, ಫೆ 3 (Daijiworld News/MSP): ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಾರಣಂತಿಕ ಕೊರೋನ ವೈರಸ್ಗೆ ಡ್ರಗ್ ಕಾಕ್ಟೈಲ್ ಚಿಕಿತ್ಸೆಯಿಂದ ಗುಣಪಡಿಸಲು ಸಾಧ್ಯ ಎಂದು ಥೈಲ್ಯಾಂಡ್ ಸರ್ಕಾರ ಹೇಳಿದೆ.
ಥೈಲ್ಯಾಂಡ್ನಲ್ಲಿ ಪ್ರವಾಸ ಚೀನಾದ 71 ವರ್ಷದ ಮಹಿಳೆಯಲ್ಲಿ ಕೊರೋನ ವೈರಸ್ ಕಂಡುಬಂದ ಹಿನ್ನಲೆಯಲ್ಲಿ ಆಕೆಗೆ ಬ್ಯಾಂಕಾಕ್ನ ವೈದ್ಯರು ಡ್ರಗ್ ಕಾಕ್ಟೈಲ್ ಚಿಕಿತ್ಸೆ ನೀಡಿದ್ದರು. ಸೋಂಕು ಪೀಡಿತ ರೋಗಿಗೆ ಈ ಚಿಕಿತ್ಸೆ ನೀಡಿದ 48 ಗಂಟೆಯಲ್ಲಿ ವೈರಾಸ್ ನಿರ್ನಾಮವಾಗಿ ರೋಗಿ ಗುಣಮುಖರಾಗಿದ್ದಾರೆ ಎಂದು ಥೈಲ್ಯಾಂಡ್ ಸರ್ಕಾರ ಪ್ರಕಟಿಸಿದೆ.
ಸೋಂಕು ಪತ್ತೆಯಾದ ಮಹಿಳೆಯನ್ನು ಆಸ್ಪತ್ರೆ ದಾಖಲಿಸಿ ಪ್ರತ್ಯೇಕವಾಗಿ ನಿಗಾ ಇರಿಸಿ ಮಾರಕ ಸಾಂಕ್ರಾಮಿಕ ರೋಗಗಳು ಹಾಗೂ ಎಚ್ಐವಿಗೆ ನೀಡಲಾಗುವ ಔಷಧಿಗಳನ್ನು ಮಿಶ್ರಣ ಮಾಡಿ ಮಹಿಳೆಗೆ ಬ್ಯಾಂಕಾಕ್ನ ವೈದ್ಯರು ಚಿಕಿತ್ಸೆ ನೀಡಿದ್ದರು. 48 ಗಂಟೆಗಳ ನಂತರ ನಡೆದ ಪರೀಕ್ಷೆಯಲ್ಲಿ ಆಕೆಯ ದೇಹದಲ್ಲಿ ಕೊರೋನ ವೈರಸ್ ಇಲ್ಲ ಎಂದು ಪ್ರಯೋಗಾಲಯದ ವರದಿ ಸ್ಪಷ್ಟವಾಗಿತ್ತು ಎಂದು ಥೈಲ್ಯಾಂಡ್ ಸರ್ಕಾರ ಪ್ರತಿ ನಿತ್ಯ ಪ್ರಕಟಿಸುವ ಆರೋಗ್ಯ ದಿಕ್ಸೂಚಿಯಲ್ಲಿ ಕೊರೋನ ಗುಣಪಡಿಸುವ ಕುರಿತ ಮಾಹಿತಿ ನೀಡಿದೆ.
ಕೊರೋನ ವೈರಸ್ ವಿಶ್ವಾದ್ಯಂತ ನೂರಾರು ಮಂದಿಯನ್ನು ಬಲಿ ಪಡೆದುಕೊಂಡಿದ್ದು, ಚೀನಾದಲ್ಲೇ 16,650 ಮಂದಿಗೆ ಸೋಂಕು ತಗುಲಿದ್ದು, ಇತರ 26 ದೇಶಗಳ 181 ಮಂದಿಯಲ್ಲಿ ಈ ಸೋಂಕು ಪತ್ತೆಯಾಗಿದೆ. ಚೀನಾದಲ್ಲಿ 361, ಫಿಲಿಫೈನ್ ನಲ್ಲಿ ಒಂದು ಸೇರಿ ಒಟ್ಟು 362 ಮಂದಿ ಸಾವನ್ನಪ್ಪಿದ್ದಾರೆ.