ವುಹಾನ್, ಫೆ 05 (Daijiworld News/MB) : ಕೊರೋನಾ ವೈರಸ್ನಿಂದಾಗಿ ಚೀನಾದಲ್ಲಿ ಬಲಿಯಾದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲ್ಲೇ ಇದ್ದು ಈಗ 490 ಕ್ಕೆ ಏರಿದೆ. 24300ಕ್ಕಿಂತಲೂ ಅಧಿಕ ಜನರಿಗೆ ಈ ಸೋಂಕು ತಗಲಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಧೃಢಪಡಿಸಿವೆ.
ಈ ಮಾರಣಾಂತಿಕ ಕೊರೋನಾ ವೈರಸ್ನಿಂದಾಗಿ ಫಿಲಿಫೆನ್ಸ್ ಹಾಗೂ ಹಾಂಗ್ಕಾಂಗ್ನಲ್ಲೂ ತಲಾ ಒಬ್ಬರು ಮೃತಪಟ್ಟಿದ್ದು ಜಾಗತಿಕವಾಗಿ ಬಲಿಯಾದವರ ಸಂಖ್ಯೆ 492ಕ್ಕೆ ಏರಿದೆ.
ಈಗಾಗಲೇ ಹಲವು ದೇಶಗಳಲ್ಲಿ ಚೀನಾದಿಂದ ಬರುವ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದ್ದು, ವಿಮಾನಯಾನ ಸಂಸ್ಥೆಗಳು ಕೂಡ ಅತೀ ಹೆಚ್ಚು ಹಾನಿಗೊಳಪಟ್ಟ ಹುಬೈ ಪ್ರಾಂತಕ್ಕೆ ತೆರಳುವ ವಿಮಾನಗಳ ಸೇವೆಯನ್ನು ರದ್ದುಮಾಡಿದೆ.
ಮಂಗಳವಾರ ಒಂದು ದಿನದಲ್ಲೇ 65 ಜನರು ಸಾವನ್ನಪ್ಪಿದ್ದು 490 ಜನರು ಮೃತರಲ್ಲಿ 479 ಜನರು ಹುಬೈ ಒಂದೇ ಪ್ರಾಂತ್ಯದವರಾಗಿದ್ದಾರೆ. ಚೀನಾದಲ್ಲಿ 15 ನಗರಗಳು ಸಂಪೂರ್ಣ ಲಾಕ್ ಡೌನ್ ಆಗಿದ್ದು ಇತರರಿಗೆ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.
ಕೊರೋನಾ ವೈರಸ್ ಚೀನಾದಲ್ಲಿ ಹರಡುತ್ತಿರುವ ಹಿನ್ನಲೆಯಲ್ಲಿ ಚೀನಾ ಸರ್ಕಾರ ಶೀಘ್ರವಾಗಿ ಹೊಸ ಆಸ್ಪತ್ರೆಗಳನ್ನು ನಿರ್ಮಿಸಿದೆ.
ಪ್ರಮುಖವಾಗಿ ಸೋಂಕು ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದ 892 ಜನರು ಗುಣಮುಖರಾಗಿದ್ದು ಅಲ್ಪ ಸಂತಸವನ್ನು ತಂದಿದೆ ಎಂದು ಚೀನಾ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.