ಚೀನಾ, ಫೆ 6 (Daijiworld News/MSP): ಚೀನಾದ ಎರಡನೇ ಅತಿದೊಡ್ಡ ಕಂಪನಿ ಹಾಗೂ ಬಹುರಾಷ್ಟ್ರೀಯ ಟೆಕ್ ಸಂಘಟನೆಯಾದ ಟೆನ್ಸೆಂಟ್ ಹೋಲ್ಡಿಂಗ್ಸ್ ಚೀನಾದಲ್ಲಿ ಕರೋನ ವೈರಸ್ ನಿಂದ ಮೃತಪಟ್ಟವರ ನೈಜ ಸಾವಿನ ಸಂಖ್ಯೆಯನ್ನು ತಪ್ಪಿ "ಸೋರಿಕೆ" ಮಾಡಿದೆ ಎಂದು ವರದಿಯಾಗಿದೆ.
ಈ ವರದಿಯ ಅಂಕಿ ಅಂಶಗಳ ಪ್ರಕಾರ ಸೋಂಕಿಗೆ 24,589 ಮಂದಿ ಸಾವನ್ನಪ್ಪಿದ್ದು, 1,54,023 ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಚೀನಾ ಸರ್ಕಾರದ ಅಧಿಕೃತ ವರದಿಗಳ ಪ್ರಕಾರ, ಕೊರೋನಾ ವೈರಸ್ 560 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದ್ದು 28,000 ಕ್ಕೂ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಟೆನ್ಸೆಂಟ್ ಸೋರಿಕೆ ವರದಿ ಪ್ರಕಾರ ಇದು ಸರ್ಕಾರ ಬಿಡುಗಡೆ ಮಾಡಿದ ನೈಜ ಸಂಖ್ಯೆಗಿಂತ ಸುಮಾರು 24,000ಕ್ಕೂ ಹೆಚ್ಚಾಗಿದೆ.
ಕೋರೋನಾ ವೈರಸ್ ನ ಕೇಂದ್ರಬಿಂದುವಾಗಿರುವ ವುಹಾನ್ನಲ್ಲಿ ಅಧಿಕೃತ ಸಂಖ್ಯೆಗೆ ಸೇರ್ಪಡೆಗೊಳ್ಳದ ಶವಗಳ ಸಂಸ್ಕಾರಕ್ಕಾಗಿ ಕಳುಹಿಸಲಾಗುತ್ತಿದೆ ಎಂದು ಸ್ಮಶಾನ ಕಾರ್ಮಿಕರ ಮೂಲದಿಂದ ಮಾಹಿತಿ ದೊರಕಿದೆ ಎಂಬ ವರದಿಗಳು ಬಂದಿವೆ.
ಏತನ್ಮಧ್ಯೆ, ವುಹಾನ್ನ ವಾರ್ಡ್ ಕಾರಿಡಾರ್ಗಳಲ್ಲಿ ಮೃತ ದೇಹಗಳ ಸಾಲು ಸಾಲುಗಳನ್ನು ಆಸ್ಪತ್ರೆಯ ಸಿಬ್ಬಂದಿ ವಿಡಿಯೋಗಳ ಮೂಲಕ ಬಹಿರಂಗಪಡಿಸಿದ್ದಾರೆ.