ವಾಷಿಂಗ್ಟನ್, ಫೆ.07 (Daijiworld News/PY) : ಅಮೆರಿಕಾ ಸೇನೆಯು ಅರೇಬಿಯನ್ ಪೆನಿನ್ಸುಲಾದಲ್ಲಿ ಅಲ್ಖೈದಾ ನಾಯಕ ಖಾಸಿಂ ಅಲ್ ರಿಮಿಯನ್ನು ಹತ್ಯೆಗೈದಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಯೆಮೆನ್ನಲ್ಲಿನ ಉಗ್ರ ನಿಗ್ರಹದ ಮೇಲೆ ಕಾರ್ಯಾಚರಣೆ ನಡೆಸಿದ ಅಮೆರಿಕಾ, ಅರೇಬಿಯನ್ ಪೆನಿನ್ಸುಲಾದಲ್ಲಿ ಆಲ್ಖೈದಾ ಸಂಘಟನೆಯ ಸಂಸ್ಥಾಪಕ ಹಾಗೂ ನಾಯಕ ಖಾಸಿಂ ಅಲ್ ರಿಮಿಯನ್ನು ಹತ್ಯೆಗೈದಿದ್ದಾರೆ ಎಂದು ಟ್ರಂಪ್ ತಿಳಿಸಿದ್ದಾರೆ.
ಡಿ. 6ರಂದು ಫ್ಲೊರಿಡಾದಲ್ಲಿರುವ ಅಮೆರಿಕದ ನೌಕಾ ನೆಲೆ ಮೇಲೆ ನಡೆಸಿದ ದಾಳಿಯ ಜವಾಬ್ದಾರಿಯು ಎಕ್ಯುಎಪಿ ಮೇಲಿತ್ತು. ಈ ದಾಳಿಯ ಸಂದರ್ಭ ಸೌದಿ ವಾಯುದಳದ ಅಧಿಕಾರಿಯು ಅಮೆರಿಕದ ಮೂವರು ನಾಯಕರನ್ನು ಹತ್ಯೆ ಮಾಡಿದ್ದನು.
ಯೆಮೆನ್ನಲ್ಲಿರುವ ನಾಗರಿಕರ ಮೇಲೆ ರಿಮಿ ನೇತೃತ್ವದಲ್ಲಿ ಎಕ್ಯುಎಪಿ ಹಿಂಸಾಚಾರ ನಡೆಸಿದ್ದು, ಅಮೆರಿಕಾದಲ್ಲಿ ನಡೆದಿರುವ ಹಲವಾರು ದಾಳಿಗಳಿಗೆ ಕುಮ್ಮಕ್ಕು ನೀಡಿದ್ದು, ಇದೀಗ ಖಾಸಿಂ ಅಲ್ ರಿಮಿ ಹತ್ಯೆಯಿಂದಾಗಿ ನಮ್ಮ ದೇಶದ ಭದ್ರತೆಗೆ ಸಂಚಕಾರವನ್ನುಂಟು ಮಾಡುವ ಈ ಸಂಘಟನೆಗಳನ್ನು ನಾಶಗೊಳಿಸಲು ಇದು ಹೆಚ್ಚು ಸಹಕಾರಿಯಾಗಿದೆ. ಅಲ್ಲದೇ ಇದರಿಂದ ಎಕ್ಯುಎಪಿ ಹಾಗೂ ಅಲ್ಖೈದಾಗೆ ಹಿನ್ನಡೆಯಾಗಿದೆ ಎಂದು ಹೇಳಿದ್ದಾರೆ.
ಆದರೆ ಈ ಕಾರ್ಯಾಚರಣೆ ಯಾವಾಗ ನಡೆದಿದೆ ಎಂಬ ಬಗ್ಗೆ ಅಮೆರಿಕಾ ಮಾಹಿತಿ ನೀಡಿಲ್ಲ.