ವಾಷಿಂಗ್ಟನ್, ಫೆ.12 (DaijiworldNews/PY): "ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅತ್ಯುತ್ತಮ ಸಂಭಾವಿತ, ಭಾರತ ಭೇಟಿಯನ್ನು ಎದುರು ನೋಡುತ್ತಿದ್ದೇನೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಫೆ.24 ಹಾಗೂ 25ರಂದು ಭಾರತಕ್ಕೆ ಟ್ರಂಪ್ ಭೇಟಿ ನೀಡಲಿದ್ದಾರೆ. ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದೊಂದಿಗೆ ವ್ಯಾಪರ ಒಪ್ಪಂದಕ್ಕೆ ಸಹಿ ಹಾಕುವ ವಿಚಾರದ ಬಗ್ಗೆ ಹೇಳಿದ್ದಾರೆ.
ಅವರು ಏನಾದರೂ ಒಪ್ಪಂದ ಮಾಡಲು ಬಯಸಿದರೆ ನೋಡೋಣ, ಸರಿಯಾದ ಒಪ್ಪಂದ ಮಾಡಲು ಸಾಧ್ಯವಾದರೆ ಒಪ್ಪಂದ ಮಾಡುತ್ತೇವೆ ಎಂದು ಟ್ರಂಪ್ ತಿಳಿಸಿದ್ದಾರೆ.
ಟ್ರಂಪ್ ಅವರ ಭಾರತ ಭೇಟಿಯು ಪ್ರಧಾನಿ ಮೋದಿ ಹಾಗೂ ಟ್ರಂಪ್ ಅವರ ನಡುವಿನ ಗಾಢವಾದ ಸಂಬಂಧದ ಪ್ರತಿಬಿಂಬವಾಗಿರಲಿದೆ. ಭಾರತ ಹಾಗೂ ಅಮೆರಿಕ ನಡುವಿನ ಬಾಂಧವ್ಯವನ್ನು ಎತ್ತರಕ್ಕೆ ಕೊಂಡೊಯ್ಯವ ಅವರ ಬಲವಾದ ಬಯಕೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅಮೆರಿಕದಲ್ಲಿರುವ ಭಾರತದ ರಾಯಭಾರಿ ತರನ್ಜೀತ್ ಸಿಂಗ್ ಸಿಂಧೂ ಅವರು, ಈ ಭೇಟಿಯು ಮೋದಿ ಮತ್ತು ಟ್ರಂಪ್ ನಡುವಣ ಗಾಢ ವೈಯಕ್ತಿಕ ಸಂಬಂಧದ ಪ್ರತಿಫಲನವಾಗಿರಲಿದೆ. ಭಾರತ ಮತ್ತು ಅಮೆರಿಕ ನಡುವಣ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಅವರ ಬಲವಾದ ಬಯಕೆಯನ್ನು ತೋರಿಸುತ್ತದೆ’ ಎಂದು ಅಮೆರಿಕದಲ್ಲಿರುವ ಭಾರತದ ರಾಯಭಾರಿ ತರನ್ಜೀತ್ ಸಿಂಗ್ ಸಿಂಧೂ ಹೇಳಿದ್ದಾರೆ.