ಲಂಡನ್, ಫೆ 14 (Daijiworld News/MB) : "ಬ್ಯಾಂಕ್ಗಳು ದಯವಿಟ್ಟು ನಿಮ್ಮ ಹಣ ವಾಪಾಸ್ ತೆಗೆದುಕೊಳ್ಳಿರಿ" ಎಂದು ವಿಜಯ್ ಮಲ್ಯ ಮನವಿ ಮಾಡಿದ್ದಾರೆ.
ಅವರು ಬ್ರಿಟನ್ ಹೈಕೋರ್ಟ್ಗೆ ಭಾರತಕ್ಕೆ ಗಡೀಪಾರು ಮಾಡುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದು ಈ ಮನವಿಯ ಮೂರು ದಿನಗಳ ವಿಚಾರಣೆಯ ಅಂತ್ಯದಲ್ಲಿ ಮಲ್ಯ, "ಬ್ಯಾಂಕ್ಗಳು ದಯವಿಟ್ಟು ನಿಮಗೆ ಬಾಕಿಯಿರುವ. ನೀವು ನೀಡಿದ ಮೂಲ ಹಣವನ್ನು ಶೇಕಡ ೧೦೦ ರಷ್ಟು ವಾಪಾಸ್ ತೆಗೆದುಕೊಳ್ಳಿ" ಎಂದು ಕೋರಿದ್ದಾರೆ.
ಕಿಂಗ್ಫಿಶರ್ಸ್ ಸಮೂಹದ ಮುಖ್ಯಸ್ಥ ವಿಜಯ್ ಮಲ್ಯ ಬ್ಯಾಂಕ್ಗಳಿಂದ ಪಡೆದ 9000 ಕೋಟಿ ರೂ. ವಾಪಾಸು ಮಾಡದೇ ವಂಚಿಸಿದ ಆರೋಪ ಎದುರಿಸುತ್ತಿದ್ದು, "ಕಾನೂನು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಒಂದೇ ಆಸ್ತಿಗಾಗಿ ಜಗಳವಾಡುತ್ತಿವೆ. ಈ ಪ್ರಕ್ರಿಯೆಯಲ್ಲಿ ನನ್ನನ್ನು ವಿವೇಚನಾಯುಕ್ತವಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ನಾನು ಹಣ ಮರುಪಾವತಿ ಮಾಡಿಲ್ಲ ಎಂಬ ಬ್ಯಾಂಕ್ಗಳ ದೂರಿನ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ನನ್ನ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಆದರೆ ಸ್ವಯಂ ಪ್ರೇರಿಯವಾಗಿ ಈಡಿ ನನ್ನ ಆಸ್ತಿ ಮುಟ್ಟುಗೋಲು ಹಾಕಲು ಪಿಎಂಎಲ್ಎ ಅಡಿಯಲ್ಲಿ ನಾನು ಯಾವುದೇ ಅಪರಾಧ ಎಸಗಿಲ್ಲ ಎಂದು ಸಮರ್ಥನೆ ಮಾಡಿದ್ದಾರೆ.
ನನ್ನ ಹಣವನ್ನು ಬ್ಯಾಂಕ್ಗಳು ಪಡೆಯಲಿ ಎಂದು ನಾನು ಹೇಳುತ್ತಿದ್ದೇನೆ. ಆದರೆ ಈಡಿ ಅದಕ್ಕೆ ಅವಕಾಶವನ್ನೇ ಮಾಡಿಕೊಡುತ್ತಿಲ್ಲ. ಈ ಆಸ್ತಿಗಳ ಮೇಲೆ ನನ್ನ ಕ್ಲೇಮ್ ಇದೆ ಎಂದು ಹೇಳುತ್ತಿದೆ. ಈಡಿ ಹಾಗೂ ಬ್ಯಾಂಕ್ಗಳು ಒಂದೇ ಆಸ್ತಿಗಾಗಿ ಹೋರಾಟ ನಡೆಸುತ್ತಿದೆ" ಎಂದು ಹೇಳಿದರು.
ಹಾಗೆಯೇ ಈ ಸಂದರ್ಭದಲ್ಲಿ ಭಾರತಕ್ಕೆ ವಾಪಾಸ್ ಹೋಗುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ನನ್ನ ಕುಟುಂಬ ಎಲ್ಲಿದೆಯೋ ಅಲ್ಲಿ ಇರುತ್ತೇನೆ. ನನ್ನ ಹಿತಾಸಕ್ತಿ ಎಲ್ಲಿ ಇದೆಯೋ ಅಲ್ಲಿ ನಾನು ಇರುತ್ತೇನೆ ಎಂದಿದ್ದಾರೆ.
ಸಿಬಿಐ ಹಾಗೂ ಈಡಿ ತಾರ್ತಿಕವಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ ಬೇರೆಯೇ ಕತೆಯಾಗುತ್ತಿತ್ತು. ಆದರೆ ಕಳೆದ ನಾಲ್ಕು ವರ್ಷದಿಂದ ಇವು ವಿವೇಚನೆ ಇಲ್ಲದೆ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದು ಆಪಾದನೆ ಮಾಡಿದರು.