ಚೀನಾ, ಫೆ 15 (Daijiworld News/MB) : ಕಳೆದ ವರ್ಷದ ಡಿಸೆಂಬರ್ನಿಂದ ಚೀನಾದಲ್ಲಿ ಜನರ ಸಾವಿಗೆ ಕಾರಣವಾಗಿರುವ ಕೊರೋನಾ ವೈರಸ್ನ ಮೊದಲ ಬಾರಿಗೆ ಬಿಡುಗಡೆ ಮಾಡಲಾಗಿದೆ.
ಭಾರತದ ಹಲವು ವಿಜ್ಷಾನಿಗಳು ಸೇರಿದಂತೆ ವಿಶ್ವದ ಹಲವು ವಿಜ್ಞಾನಿಗಳು ಈ ಡೆಡ್ಲಿ ವೈರಸ್ಗೆ ಔಷಧಿ ಪತ್ತೆಹಚ್ಚುವ ಉದ್ದೇಶದಿಂದ ಸಂಶೋಧನೆ ನಡೆಸುತ್ತಿದ್ದು ಈಗ ಕೊರೋನಾ ವೈರಸ್ನ ಸೂಕ್ಷ್ಮದರ್ಶಕ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.
ಈವರೆಗೆ ಈ ಚಿತ್ರಗಳನ್ನು ಬಿಡುಗಡೆ ಮಾಡಲು ವಿಜ್ಞಾನಿಗಳು ಆಸಕ್ತಿ ತೋರಿರಲಿಲ್ಲ. ಆದರೆ ಅಮೆರಿಕದ ರಾಷ್ಟ್ರೀಯ ಅಲರ್ಜಿ ಹಾಗೂ ಸೋಂಕು ರೋಗಗಳ ಅಧ್ಯಯನ ಸಂಸ್ಥೆ (ಎನ್ಐಎಐಡಿ) ವಿಜ್ಞಾನಿಗಳು ಇದೇ ಮೊದಲ ಬಾರಿಗೆ ವೈರಸ್ನ ಸೂಕ್ಷ್ಮದರ್ಶಕ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.