ವಾಷಿಂಗ್ಟನ್, ಫೆ.19 (DaijiworldNews/PY): ಫೆಡರಲ್ ಸರ್ಕೀಟ್ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಭಾರತ ಮೂಲದ ಶ್ರೀನಿವಾಸನ್ ನೇಮಕಗೊಂಡಿದ್ದಾರೆ.
52 ವರ್ಷದ ಶ್ರೀನಿವಾಸನ್ ಅವರು ಅಮೆರಿಕದ ಅಪೀಲುಗಳ ಡಿಸಿ ಸರ್ಕೀಟ್ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದು, ಅಮೆರಿಕದ ನ್ಯಾಯಾಲಯಗಳಲ್ಲಿ ದೊಡ್ಡ ಹುದ್ದೆ ಅಲಂಕರಿಸಿದ ಭಾರತ ಮೂಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಶ್ರೀನಿವಾಸನ್ ಅವರು ಇದೇ ಫೆ.12ರಂದು ಡಿಸಿ ಫೆಡರಲ್ ಸರ್ಕೀಟ್ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಈಗಾಗಲೇ ಎರಡು ಬಾರಿ ಪರಿಗಣಿಸಲ್ಪಟ್ಟಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಈಗಾಗಲೇ ಎರಡು ಬಾರಿ ಪರಿಗಣಿಸಲ್ಪಟ್ಟಿದ್ದ ಶ್ರೀನಿವಾಸನ್ ಅವರು, ಇದೇ ಫೆ.12ರಂದು ಡಿಸಿ ಫೆಡರಲ್ ಸರ್ಕೀಟ್ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.