ವಾಷಿಂಗ್ಟನ್, ಫೆ.24 (DaijiworldNews/PY) : ಭಾರತೀಯ ಮೂಲದ ಯುವಕನನ್ನು ತರಕಾರಿ ಶಾಪ್ಗೆ ನುಗ್ಗಿದ್ದ ಮುಸುಕುದಾರಿ ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆಗೈದ ಘಟನೆ ನಸುಕಿನ ವೇಳೆ ಲಾಸ್ ಏಂಜಲೀಸ್ನಲ್ಲಿ ನಡೆದಿದೆ ಎಂದು ಪೊಲೀಸ್ ಆಧಿಕಾರಿಗಳು ತಿಳಿಸಿದ್ದಾರೆ.
ಮೃತಪಟ್ಟವನನ್ನು ಮಣಿಂದರ್ ಸಿಂಗ್ ಸಾಹಿ (31) ಎಂದು ಗುರುತಿಸಲಾಗಿದೆ.
ಮಣಿಂದರ್ ಸಿಂಗ್ ವಿವಾಹಿತನಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ಕೌಂಟಿಯ ವಿಟ್ಟಿಯರ್ ನಗರದಲ್ಲಿನ 7 ಇಲೆವೆನ್ ತರಕಾರಿ ಮಳಿಗೆಯಲ್ಲಿ ಸಿಂಗ್ ಕೆಲಸ ಮಾಡುತ್ತಿದ್ದರು.
ಸಿಂಗ್ ಮೂಲತಃ ಹರಿಯಾಣದ ಕರ್ನಾಲ್ನವರಾಗಿದ್ದು, ರಾಜಕೀಯ ಬಿಟ್ಟು ಕಳೆದ ಆರು ತಿಂಗಳ ಹಿಂದೆಯಷ್ಟೇ ಅವರು ಅಮರಿಕಾಕ್ಕೆ ಆಗಮಿಸಿರುವುದಾಗಿ ವರದಿ ತಿಳಿಸಿದೆ.
ಸಿಂಗ್ ಅವರು ಇಡೀ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಏಕೈಕ ವ್ಯಕ್ತಿಯಾಗಿದ್ದರು. ಇವರು ತನ್ನ ಪತ್ನಿ ಹಾಗೂ ಮಕ್ಕಳಿ ಹಣ ಕಳುಹಿಸುತ್ತಿದ್ದರು ಎಂದು ಅಮೆರಿಕದ್ಲಲಿರುವ ಸಂಬಂಧಿಕರು ತಿಳಿಸಿರುವುದಾಗಿ ವರದಿ ತಿಳಿಸಿದೆ.