ಪ್ಯಾರಿಸ್, ಮಾ.22 (Daijiworld News/MB) : ವಿಶ್ವದಾದ್ಯಂತ ಜನರ ಸಾವಿಗೆ ಕಾರಣವಾಗಿ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ಗೆ ಹೊಸ ಚಿಕಿತ್ಸಾ ವಿಧಾನದ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ ಎಂದು ಫ್ರಾನ್ಸ್ ಸಂಶೋಧಕರು ಹೇಳಿದ್ದಾರೆ.
ಆರು ದಿನಗಳಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕವಾಗಿ ಹರಡುವುದನ್ನು ಈ ಹೊಸ ಔಷಧಿ ತಡೆಗಟ್ಟಬಲ್ಲದು ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಕುರಿತಾಗಿ ಹಾಸ್ಪಿಟಲ್ ಇನ್ಸ್ಟಿಟ್ಯೂಷನ್ ಆಫ್ ಹಾಸ್ಪಿಟಲೊ ಯುನಿವರ್ಸಿಟೀಸ್ (ಐಎಚ್ಯು ಮೆಡಿಟರೆನಿ) ಪ್ರೊಫೆಸರ್ ದಿದೀರ್ ರವೂಲ್ಟ್ ಅವರು ಈ ವಾರದ ಆರಂಭದಲ್ಲಿ ನಡೆದ ಪರೀಕ್ಷಾರ್ಥ ಪ್ರಯೋಗವನ್ನು ವಿವರಿಸುವ ವಿಡಿಯೋ ಒಂದನ್ನು connexionfrance.com ಎಂಬ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಾಂಕ್ರಾಮಿಕ ರೋಗಗಳ ವಿಶೇಷ ತಜ್ಞ ರವೂಲ್ಟ್ ಅವರಿಗೆ ಫ್ರಾನ್ಸ್ ಸರ್ಕಾರ ಕೊರೊನಾ ವೈರಸ್ಗೆ ಚಿಕಿತ್ಸೆ ಬಗ್ಗೆ ಸಂಶೋಧನೆ ನಡೆಸಲು ಸೂಚಿಸಿತ್ತು.
ಇದೀಗ ಅವರು ಕ್ಲೋರೋಕ್ವಿನ್ ಎಂಬ ಔಷಧವನ್ನು ಕೊರೊನಾ ಸೋಂಕಿತರಿಗೆ ನೀಡಿದರೆ ರೋಗಿಗಳು ಗುಣ ಮುಖರಾಗುತ್ತಾರೆ. ಇದು ಹೆಚ್ಚು ಶೀಘ್ರವಾಗಿ ಆಗುತ್ತದೆ. ಹಾಗೆಯೇ ಈ ಸೋಂಕು ಸಾಂಕ್ರಾಮಿಕವಾಗಿ ಹರಡುವುದು ಕೂಡಾ ಭಾರೀ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ ಎಂದಿದ್ದಾರೆ.
ಮಲೇರಿಯಾ ಚಿಕಿತ್ಸೆ ನೀಡಲು ಬಳಸುವ ಕ್ಲೋರೋಕ್ಲಿನ್ ಔಷಧಿಯನ್ನು ಪ್ಲೇಕ್ವಿನಿಲ್ ಔಷಧಿಯನ್ನು ನೀಡಲಾಗಿತ್ತು. ನೈಸ್ ಹಾಗೂ ಅವಿಗಾನ್ ಎಂಬ ಎರಡು ಪಟ್ಟಣಗಳಲ್ಲಿ ಇದುವರೆಗೆ ಚಿಕಿತ್ಸೆ ಪಡೆಯದ ಸೋಂಕಿತರಿಗೆ ಈ ಚಿಕಿತ್ಸೆ ನೀಡಲಾಗಿತ್ತು ಎಂದಿದ್ದಾರೆ.
ಹಾಗೆಯೇ ಸ್ವಯಂಪ್ರೇರಿತವಾಗಿ ಈ ಚಿಕಿತ್ಸೆ ಪಡೆಯಲು ಬಂದ ೨೪ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿತ್ತು ಎಂದು ಮಾಧ್ಯಮದ ವರದಿ ತಿಳಿಸಿದೆ.
ರೋಗಿಗಳಿಗೆ ೧೦ ದಿನಗಳ ಕಾಲ ದಿನಕ್ಕೆ ೬೦೦ ಎಂಸಿಜಿಯಂತೆ ಔಷಧಿ ನೀಡಲಾಗಿತ್ತು. ಅವುಗಳ ಪರಿಣಾಮದ ಬಗ್ಗೆ ತೀವ್ರ ನಿಗಾ ಇಡಲಾಗಿತ್ತು. ಇದರ ಅಡ್ಡ ಪರಿಣಾಮಗಳ ಬಗ್ಗೆ ಕೂಡಾ ಪರಿಶೀಲನೆ ನಡೆಸಲಾಗಿದೆ ಎಂದು ವರದಿಯಾಗಿದೆ.