ರೋಮ್, ಮಾ.23 (Daijiworld News/MB) : ಕೊರೊನಾ ವೈರಸ್ ಜಗತ್ತಿನಾದ್ಯಂತ ತನ್ನ ಕರಾಳ ಹಸ್ತ ಚಾಚಿದ್ದು ಇಟಲಿಯಲ್ಲಿ ಸೋಂಕಿತರ ಹಾಗೂ ಮೃತ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲ್ಲೇ ಇದೆ. ಭಾನುವಾರ ಒ೦ದು ದಿನವೇ ಇಟಲಿಯಲ್ಲಿ 651 ಮಂದಿ ಕೊರೊನಾಗೆ ಬಲಿಯಾಗಿದ್ದು 5560 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ.
ಇಟಲಿಯಲ್ಲಿ ಶನಿವಾರ ಒಂದು ದಿನವೇ 800ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು ಭಾನುವಾರ 651 ಮಂದಿ ಕೊರೊನಾ ವೈರಸ್ಗೆ ಬಲಿಯಾಗಿದ್ದಾರೆ.
ಕೊರೊನಾ ವೈರಸ್ 188 ದೇಶಗಳಿಗೆ ಹಬ್ಬಿದ್ದು 13 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದೆ. 3 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ಹರಡಿದೆ.
ಇಟಲಿಯೊಂದರಲ್ಲೇ ಮೃತರ ಸಂಖ್ಯೆ 5,500ಕ್ಕೆ ಏರಿಕೆ ಆಗಿದ್ದು ಸುಮಾರು 59,138 ಮಂದಿಗೆ ಸೋಂಕು ತಗಲಿದೆ. ಆ ಪೈಕಿ 6,072 ಮಂದಿ ಚೇತರಿಸಿಕೊಂಡಿದ್ದು 42,681 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಇರಾನ್ನಲ್ಲಿ 1556, ಸ್ಪೇನ್ನಲ್ಲಿ 1381, ಫ್ರಾನ್ಸ್ನಲ್ಲಿ 562, ಬ್ರಿಟನ್ನಲ್ಲಿ ಇನ್ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಕೊರೊನಾ ಮೊದಲು ಪತ್ತೆಯಾದ ಚೀನಾವೂ ಈಗ ಚೇತರಿಸಿಕೊಳ್ಳುತ್ತಿದ್ದಾರೆ.