ನವದೆಹಲಿ, ಮಾ. 24 (Daijiworld News/MSP) : ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಪಾಕ್ ಜನರ ಪಾಲಿನ 'ಹೀರೋ' ವೈದ್ಯರೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು 26 ವರ್ಷದ ವಯಸ್ಸಿನ ಡಾ.ಉಸ್ಮಾನಿಯಾ ಎಂದು ಗುರುತಿಸಲಾಗಿದೆ.
ಪಾಕಿಸ್ತಾನದ ಗಿಲ್ಗಿಟ್-ಬಾಲ್ಟಿಸ್ತಾನ್ (ಜಿಬಿ) ಯಲ್ಲಿ ಕರೋನ ವಿರುದ್ಧದ ಹೋರಾಟದಲ್ಲಿ ಇವರು ನೇತೃತ್ವ ವಹಿಸಿದ್ದರು.
ಇವರು ಇರಾನ್ ಮತ್ತು ಇರಾಕಿನಿಂದ ವಾಪಸದವರ ತಪಾಸಣೆ ನಡೆಸುತ್ತಿದ್ದರು.
ಶುಕ್ರವಾರ ತಮ್ಮ ಮನೆಗೆ ಬಂದಿದ್ದ ಅವರು ಮರುದಿನವೇ ತೀವ್ರ ಸ್ವರೂಪದ ಅನಾರೋಗ್ಯ ಉಂಟಾಗಿತ್ತು. ಅವರಿಗೆ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಯಿತಾದರೂ ಪ್ರಯೋಜನವಾಗಲಿಲ್ಲ.
ಆದರೆ ಅವರು ಸೋಂಕಿನ ಅಥವಾ ಇತರ ಕಾರಣಗಳಿಂದ ಮೃತಪಟ್ಟಿದ್ದಾರೆಯೇ ಎಂದು ನಿರ್ದಿಷ್ಟವಾಗಿ ಖಚಿತವಾಗಿಲ್ಲ ಎಂದು ಜಿಬಿ ಸರ್ಕಾರದ ವಕ್ತಾರ ಫೈಜುಲ್ಲಾ ಫರಾಕ್ ಹೇಳಿದ್ದಾರೆ.
ಇರಾನ್ನ ಗಡಿಯನ್ನು ಹಂಚಿಕೊಳ್ಳುವ ಟಫ್ಟಾನ್ ಎಂಬ ಪಟ್ಟಣದಿಂದ ಈ ಪ್ರದೇಶಕ್ಕೆ ಬರುವ ರೋಗಿಗಳ ತಪಾಸಣೆಯಲ್ಲಿ ವೈದ್ಯರು ಸಕ್ರಿಯರಾಗಿ ಆರೈಕೆ ಮಾಡಿ ಜನರ ಮೆಚ್ಚುಗೆ ಗಳಿಸಿದ್ದರು.