ಚೀನಾ, ಮಾ.24 (DaijiworldNews/PY) : ಸೋಮವಾರ ಚೀನಾದಲ್ಲಿ ದಿಢೀರನೇ ಮತ್ತೆ 78 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ. ಚೀನಾ ಸಹಜ ಸ್ಥಿತಿಗೆ ಮರಳಿತ್ತು, ವಿದೇಶಗಳಲ್ಲಿದ್ದವರು ವಾಪಾಸ್ಸಾದ ಕಾರಣ ಸೋಂಕು ಪೀಡಿತರ ಸಂಖ್ಯೆ ಅಧಿಕವಾಗಿದೆ.
ಕೊರೊನಾ ಸೋಂಕು ಪೀಡಿತ 78 ಜನರಲ್ಲಿ ಸುಮಾರು 74 ಜನರು ವಿದೇಶದಿಂದ ವಾಪಸ್ಸಾದವರೇ ಆಗಿದ್ದಾರೆ ಎಂಬುದಾಗಿ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಕೊರೊನಾ ವೈರಸ್ ಮೊದಲು ಚೀನಾದಲ್ಲಿ ಕಾಣಿಸಿಕೊಂಡಿದ್ದು, ಈ ಮಾರಣಾಂತಿಕ ವೈರಸ್ ಬಳಿಕ ಇಡೀ ವಿಶ್ವವನ್ನೇ ವ್ಯಾಪಿಸಿತ್ತು. ಚೀನಾದಲ್ಲಿ ಇತ್ತೀಚೆಗಷ್ಟೇ ಕೊರೊನಾ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿತ್ತು. ಆದರೆ ಈ ಸೋಂಕು ಚೀನಾದಲ್ಲಿ ನಿಯಂತ್ರಣಕ್ಕೆ ಬರುವ ಲಕ್ಷಣವೇ ಕಾಣಿಸುತ್ತಿರಲಿಲ್ಲ. ಚೀನಾದಲ್ಲಿ ಸೋಮವಾರ ಒಂದೇ ದಿನದಲ್ಲಿ 78 ಹೊಸ ಪ್ರಕರಣ ದಾಖಲಾಗಿರುವುದು ಎಲ್ಲರಲ್ಲಿ ಆತಂತ ಮೂಡಿಸಿದೆ.
ಚೀನಾ ಕೊರೊನಾ ವೈರಸ್ ಕಾಣಿಸಿಕೊಂಡ ನಂತರ ವೈರಸ್ ನಿಯಂತ್ರಣಕ್ಕೆ ಸಿದ್ದವಾಗಿತ್ತು. ಹೈಟೆಕ್ ಆಸ್ಪತ್ರೆಗಳನ್ನು ರೋಗಿಗಳಾಗಿ ನಿರ್ಮಾಣ ಮಾಡುವ ಕೆಲಸದಲ್ಲಿ ತೊಡಗಿತ್ತು. ಎಲ್ಲವೂ ಇನ್ನೇನು ನಿಯಂತ್ರಣಕ್ಕೆ ಬಂದಿದೆ ಎನ್ನುವ ಸಂದರ್ಭದಲ್ಲಿ ಪುನಃ ಈ ವೈರಸ್ ಚೀನಾವನ್ನು ಕಾಡಿದೆ.
ಕೊರೊನಾ ವೈರಸ್ ಚೀನಾದ ಬಳಿಕ ಇಟಲಿಯಲ್ಲಿಯತ್ತ ವ್ಯಾಪಿಸಿದ್ದು, ಸಾವಿರಾರು ಜನರು ಮೃತಪಟ್ಟಿದ್ದಾರೆ. ಸೋಮವಾರ 600 ಜನರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 6,078 ಕ್ಕೆ ಏರಿಕೆಯಾಗಿದೆ. ಹಾಗಾಗಿ, ಅಲ್ಲಿನ ಪ್ರಧಾನಿ ಇಟಲಿಯನ್ನು ಬಂದ್ ಮಾಡಲು ಆದೇಶ ಈ ನೀಡಿದ್ದಾರೆ.
ಇಟಲಿಯಲ್ಲಿ ಸೋಂಕಿತರ ಸಂಖ್ಯೆ 63 ಸಾವಿರಕ್ಕೆ ಏರಿದೆ. ದಿನ ನಿತ್ಯದ ಬಳಕೆಯ ವಸ್ತುಗಳು ಸರಿಯಾಗಿ ಸಿಗದೇ ಇದ್ದ ಕಾರಣ ಮಧ್ಯಮ ವರ್ಗದ ಜನರು ಕಂಗಾಲಾಗಿದ್ದಾರೆ. ಹಾಗಾಗಿ, ತುತ್ತು ಅನ್ನಕ್ಕೂ ಪರದಾಡುವಂತ ಸ್ಥಿತಿ ಎದುರಾಗಿದೆ. ಇನ್ನೂ ದೇಶದ ಆರ್ಥಿಕತೆ ಸಂಪೂರ್ಣವಾಗಿ ಕುಸಿದಿದೆ.
ಈ ಮಾರಣಾಂತಿಕ ಕೊರೊನಾ ವೈರಸ್ಗೆ ಜಗತ್ತಿನಾದ್ಯಂತ 16,500 ಜನರು ಸಾವನ್ನಪ್ಪಿದ್ದು, 378,000ಕ್ಕಿಂತ ಹೆಚ್ಚು ಜನರು ಸೋಂಕು ಪೀಡಿತರಾಗಿದ್ದಾರೆ. ಅಲ್ಲದೇ, 1.5 ಬಿಲಿಯನ್ ಜನರು ಮನೆಯಲ್ಲಿ ಕುಳಿತು ನಿರ್ಬಂಧ ವಿಧಿಸಿಕೊಂಡಿದ್ದಾರೆ.